ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 

         

ಪರಿಚಯ 

ಬೆಂಗಳೂರಿನ ಮೇಯರ್ 1957ರಲ್ಲಿ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯನ್ನು ಆರಂಭಿಸಿದರು. ಅದೊಂದು ಸಣ್ಣ ಕ್ಯಾನ್ಸರ್ ಕೇಂದ್ರವಾಗಿ ಸ್ಥಾಪಿಸಲ್ಪಟ್ಟಿತ್ತು. ಕರ್ನಾಟಕ ಸರ್ಕಾರವು ಆ ಸೊಸೈಟಿಯನ್ನು 1970ರಲ್ಲಿ ವಹಿಸಿಕೊಂಡು,  ಸಂಘಗಳ ನೋಂದಣಿ ಕಾಯ್ದೆ ಅಡಿಯಲ್ಲಿ ನೋಂದಾಯಿತ ಸಂಸ್ಥೆಯಾದ ಇದು 1980ರಲ್ಲಿ ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಯಿತು. ಅದೇ ವರ್ಷದಲ್ಲಿ ಭಾರತ ಸರ್ಕಾರದಿಂದ  ಪ್ರಾದೇಶಿಕ ಕ್ಯಾನ್ಸರ್ ಕೇಂದ್ರವಾಗಿ ಮಾನ್ಯತೆ ಗಳಿಸಿತು.  ಪ್ರಸ್ತುತ ನಮ್ಮ ದೇಶದಲ್ಲಿ ಕಾರ್ಯನಿರತವಾಗಿರುವ 27 ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಗಳಲ್ಲಿ ಇದೂ ಸಹ ಒಂದಾಗಿದೆ. ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯು, ಕ್ಯಾನ್ಸರ್ ವಿರುದ್ಧದ ಅಂತಾರಾಷ್ಟ್ರೀಯ ಒಕ್ಕೂಟದ ಸದಸ್ಯ ಸಂಸ್ಥೆಯಾಗಿದೆ.  ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು  ಅತ್ಯುತ್ಕೃಷ್ಟ ಸಂಸ್ಥೆ (ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್) ಎಂದು ಗುರುತಿಸಿ ಮಾನ್ಯತೆ ನೀಡಿದೆ.

ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯು 650 ಹಾಸಿಗೆಯುಳ್ಳ ಸಂಸ್ಥೆಯಾಗಿದ್ದು, ವರ್ಷಕ್ಕೆ ಸುಮಾರು 3 ಲಕ್ಷ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದೆ. ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯು 24 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಭಾರತದ ಅತ್ಯಂತ ಹೆಮ್ಮೆಯ ಪುತ್ರರ ಸ್ಮರಣೆಯನ್ನು ನೆನಪಿಸುತ್ತದೆ.  ಶ್ರೀ ರಫಿ ಅಹ್ಮದ್ ಕಿದ್ವಾಯಿಯವರು ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಬೇರುಗಳನ್ನು ಗಟ್ಟಿಗೊಳಿಸಲು ಅವರು ಇತರೆ ರಾಷ್ಟ್ರೀಯ ನಾಯಕರೊಂದಿಗೆ ಭುಜಕ್ಕೆ ಭುಜವನ್ನು ನೀಡಿ ಕೆಲಸವನ್ನು ಮಾಡಿದರು.

1957ರಲ್ಲಿ ಬೆಂಗಳೂರಿನ ಪುರಪಿತೃಗಳು ಒಟ್ಟಾಗಿ ಸೇರಿ, ತಮ್ಮ ಪರಿಕಲ್ಪನೆಯ ಸಾಕಾರಕ್ಕಾಗಿ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಎಂಬ (ಕಿ.ಸ್ಮಾ.ಗಂ.ಸಂ.) ಒಂದು ಖಾಸಗಿ ಸಂಸ್ಥೆಯನ್ನು ಆರಂಭಿಸಿದ್ದರು. ನಂತರ ಇದನ್ನು 1971ರಲ್ಲಿ ಕರ್ನಾಟಕ ಸರ್ಕಾರವು ಸ್ವಾಧೀನಪಡಿಸಿಕೊಂಡಿತು. ಅಂತಿಮವಾಗಿ 1973ರ 26ರಂದು ಇದು ಒಂದು ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆಯಾಗಿ ಉದ್ಘಾಟನೆಗೊಂಡಿತು. 1979ರ ಡಿಸೆಂಬರ್ 27ರಂದು ಹೊರಡಿಸಲಾದ ರಾಜ್ಯದ ರಾಜ್ಯಪಾಲರ ಆದೇಶದ ಪ್ರಕಾರ ಈ ಸಂಸ್ಥೆಯನ್ನು ಸರ್ಕಾರದ ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತಿಸಲಾಯಿತು.  ಕರ್ನಾಟಕ ರಾಜ್ಯದಲ್ಲಿ ಗಂಥಿಶಾಸ್ತ್ರ ಕ್ಷೇತ್ರದ ಮುಂಚೂಣಿ ಮತ್ತು ಮಾದರೀ ಸಂಸ್ಥೆಯನ್ನಾಗಿ ಇದನ್ನು ರೂಪಿಸಲು ಉದ್ದೇಶಿಸಲಾಯಿತು. ಇದಕ್ಕಾಗಿ ರಾಜ್ಯ ಸರ್ಕಾರ, ಇತರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಂಪನ್ಮೂಲಗಳನ್ನು ಮತ್ತು ಪರಿಣತಿಯನ್ನು ಕ್ರೋಢೀಕರಿಸಿ, ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಹಾಯಕವಾಗುವಂತೆ ಈ ಸಂಸ್ಥೆಯನ್ನು ಒಂದು ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸಲಾಯಿತು. 1980ರ ಜನವರಿ 8ರಂದು `ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (KMIO)’ ಎಂಬ ಹೆಸರಿನ ಸ್ವತಂತ್ರ ಸಂಸ್ಥೆಯಾಗಿ ನೋಂದಾಯಿಸಲ್ಪಟ್ಟಿತು. ಸಂಸ್ಥೆಯ ಮೊದಲ ನಿರ್ದೇಶಕರಾದ ಡಾ.ಎಂ.ಕೃಷ್ಣಭಾರ್ಗವ, 1980ರ ಜನವರಿ 23ರಂದು ಈ ಸ್ವಾಯತ್ತ ಸಂಸ್ಥೆ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಸಂಸ್ಥೆಯ ಇತಿಹಾಸದಲ್ಲಿ 1980ರ ಏಪ್ರಿಲ್ 21 ಸೋಮವಾರ ಒಂದು ಸ್ಮರಣಾರ್ಹ ದಿನವಾಗಿತ್ತು. ಅಂದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮಾನ್ಯ ಶ್ರೀ ಬಿ.ಶಂಕರಾನಂದರವರು ಔಪಚಾರಿಕವಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯನ್ನು ಉದ್ಘಾಟಿಸಿದರು.

ಇವೆಲ್ಲದರ ನಂತರ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ತನ್ನ ಸ್ವಾಯತ್ತ ಸ್ಥಾನಮಾನದೊಂದಿಗೆ, ಆಧುನಿಕ, ಬಹುಶಿಸ್ತೀಯ, ಸಮಗ್ರ ಕ್ಯಾನ್ಸರ್‌ ಆರೈಕೆ ಸೌಲಭ್ಯಗಳೊಂದಿಗೆ ತೃತೀಯ(ಟರ್ಷಿಯರಿ) ಕ್ಯಾನ್ಸರ್ ಆರೈಕೆ ಕೇಂದ್ರವಾಗಿ ವಿಕಸನಗೊಂಡಿತು. ವೈದ್ಯಕೀಯ/ಕ್ಲಿನಿಕಲ್ ಸಂಶೋಧನೆಗಳನ್ನು ನಡೆಸುವುದು. ಕ್ಯಾನ್ಸರ್ ಶಿಕ್ಷಣ ಕಾರ್ಯಕ್ರಮಗಳನ್ನು ಸಂಸ್ಥೆಯಲ್ಲಿ ಮತ್ತು ಸಮುದಾಯದಲ್ಲಿ ಉತ್ತೇಜಿಸುವುದು ಮತ್ತು ಯೋಜಿತ ಸಾಂಕ್ರಾಮಿಕ ರೋಗಶಾಸ್ತ್ರಿಯ ಅಧ್ಯಯನಗಳನ್ನು ಪ್ರಾರಂಭಿಸುವುದು ಇತ್ಯಾದಿ ಕಾರ್ಯಗಳನ್ನು ಸಂಸ್ಥೆಯು ನಿರ್ವಹಿಸುತ್ತಾ ಬಂದಿದೆ. ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲು, ಆಯವ್ಯಯದಲ್ಲಿ ಅನುದಾನ ಹಂಚಿಕೆ ಪಡೆಯಲು,  ಸಿಬ್ಬಂದಿ ನೇಮಕಾತಿ ಮತ್ತು ಇತರ ಕಾರ್ಯವಿಧಾನಗಳ ಮೇಲೆ ಹೆಚ್ಚಿನ ಗಮನ ಹರಿಸಲು, ಈ ಸಂಸ್ಥೆಗೆ ರಾಜ್ಯ ಸರ್ಕಾರವು ಸ್ವಾಯತ್ತತೆಯನ್ನು ನೀಡಿದೆ. ಇಂತಹ ಸ್ವಾಯತ್ತತೆಯ ಸಂಸ್ಥೆಗೆ ಕೇಂದ್ರೀಕೃತ ಆಡಳಿತ ಮತ್ತು ನಿರ್ವಹಣಾ ಅಧಿಕಾರವನ್ನು ನೀಡುತ್ತದೆ ಮತ್ತು ಆ ಮೂಲಕ  ಸಂಸ್ಥೆಯ ಎಲ್ಲ ಕೆಲಸಗಳಲ್ಲಿ ಶ್ರೇಷ್ಟ ಗುಣಮಟ್ಟ ಕಾಪಾಡಿಕೊಳ್ಳವಲ್ಲಿ ಸಹಾಯಕವಾಗಿದೆ. ಕರ್ನಾಟಕ ರಾಜ್ಯದಲ್ಲಿ ಮತ್ತು ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸೇವೆ ಮತ್ತು ಕ್ಯಾನ್ಸರ್ ರೋಗ ನಿಯಂತ್ರಣ ಕಾರ್ಯದಲ್ಲಿ ಸರ್ವಸಾಮರ್ಥ್ಯದೊಂದಿಗೆ ಅವಿರತ ಪರಿಶ್ರಮ ವಹಿಸಿ ಭವಿಷ್ಯದಲ್ಲಿಯೂ ದುಡಿಯುವ ಭರವಸೆಯೊಂದಿಗೆ ಸಂಸ್ಥೆಯು ಮುನ್ನಡೆಯುತ್ತಿದೆ.

             

ಮಾನ್ಯತೆಗಳು 

1

ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ(RCC)

2

ಕ್ಯಾನ್ಸರ್ ಆರೈಕೆಯಲ್ಲಿ ಅತಿಶ್ರೇಷ್ಠ ಕೇಂದ್ರ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ.

3

ಭಾರತದಲ್ಲಿ ಎರಡನೇ ಅತ್ಯುತ್ತಮಗಂಥಿಶಾಸ್ತ್ರ ಸಂಸ್ಥೆ (ಆಂಕಾಲಾಜಿ ಇನ್ಸ್ಟಿಟ್ಯೂಟ್)

4

UICC ಸದಸ್ಯಸಂಸ್ಥೆ (ಕ್ಯಾನ್ಸರ್ ವಿರುದ್ಧದ ಅಂತರರಾಷ್ಟ್ರೀಯ ಒಕ್ಕೂಟ)

         

ಸಂಯೋಜನೆಗಳು

ಸಂಸ್ಥೆಯು ನೀಡುತ್ತಿರುವ ಕೋರ್ಸುಗಳಿಗೆ ಈ ಕೆಳಕಂಡಂತೆ ಸಂಯೋಜನೆ/ಮಾನ್ಯತೆ ಇದೆ 

1

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

2

ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ)

3

ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ)

4

ಅಣುಶಕ್ತಿ ನಿಯಂತ್ರಣ ಮಂಡಳಿ (ಎಇಆರ್‌ಬಿ)ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ

5

ಭಾರತೀಯ ಶುಶ್ರೂಷಾ ಸಂಸ್ಥೆ (ಐಎನ್‌ಸಿ)

6

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌)

          

ದೃಷ್ಠಿಕೋನ

ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಿ ಅವರ ದುಃಖವನ್ನು ನಿವಾರಿಸುವುದು ಮತ್ತು ಸಾಕ್ಷ್ಯ ಆಧಾರಿತ ಆರೈಕೆ ಸಹಿತ  ಅವರ ಜೀವನದ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳುವುದು.

1. ರೋಗಿಯು ಯಾವುದೇ ಸಾಮಾಜಿಕ-ಆರ್ಥಿಕ ಸ್ತರಕ್ಕೆ ಸೇರಿದವರಾದರೂ, ಸಂಸ್ಥೆಯಲ್ಲಿ ಆರೈಕೆ ಬಯಸುವ ಎಲ್ಲರಿಗೂ ಇದೊಂದು ಕೈಗೆಟಕುವ ಆಸ್ಪತ್ರೆಯನ್ನಾಗಿಸುವುದು.

2. ಗಂಥಿಶಾಸ್ತ್ರ (ಆಂಕಾಲಜಿ) ವೃತ್ತಿಪರರ ಭವಿಷ್ಯದ ಪೀಳಿಗೆಗೆ ತರಬೇತಿ ನೀಡುವುದು

3. ಗಂಥಿಶಾಸ್ತ್ರದಲ್ಲಿ ಸಂಶೋಧನೆ ಮತ್ತು ಉಪಶಾಮಕ ಆರೈಕೆಗಾಗಿ ಬಲವಾದ ನೆಲೆಯನ್ನು ಅಭಿವೃದ್ಧಿಪಡಿಸುವುದು.

4. ಸಮುದಾಯದಲ್ಲಿ ಕ್ಯಾನ್ಸರ್ ನಿಯಂತ್ರಣಕ್ಕಾಗಿ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ತಡೆಗಟ್ಟುವಿಕೆಗಾಗಿ ನೀತಿಗಳೊಂದಿಗೆ, ತಡೆಗಟ್ಟುವಿಕೆ ಗಂಥಿಶಾಸ್ತ್ರದ  (ಪ್ರಿವೆಂಟಿವ್ ಆಂಕಾಲಜಿ) ಸಮಗ್ರ ಕೇಂದ್ರವನ್ನು ಅಭಿವೃದ್ಧಿಪಡಿಸುವುದು.

ಮಹೋದ್ದೇಶ

1. ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬಗಳಿಗೆ, ಗುಣಪಡಿಸುವ ಸ್ಪಂದನಾತ್ಮಕ ವಾತಾವರಣವನ್ನು ಒದಗಿಸುವುದು.

2. ಕ್ಯಾನ್ಸರ್ರೋಗಿಗಳಸೇವೆಯಲ್ಲಿ  ಶ್ರೇಷ್ಠ ಮಟ್ಟದ ರಾಷ್ಟ್ರೀಯ ಕೇಂದ್ರವಾಗುವತ್ತ ಸಂಸ್ಥೆಯನ್ನು ಅಭಿವೃದ್ಧಿಪಡಿಸುವುದು.

3. ಎಲ್ಲಾ ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಆರೈಕೆ ಮತ್ತು ಗುಣಮಟ್ಟದ ಜೀವನ ಒದಗಿಸಲು ಈಗಾಗಲೇ ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಉನ್ನತೀಕರಿಸುವುದು.

4. ಆರೈಕೆ ಬಯಸುವ ರೋಗಿಗಳಿಗೆ ಅಗತ್ಯವಾದ ಬಳಕೆದಾರ-ಸ್ನೇಹಿ ಸೌಲಭ್ಯಗಳನ್ನು ಒದಗಿಸುವುದು.

5. ಕ್ಯಾನ್ಸರ್ ಸಂಶೋಧನೆಗಾಗಿ ಅಂತಾರಾಷ್ಟ್ರೀಯ/ ರಾಷ್ಟ್ರೀಯ ಸಹಯೋಗವನ್ನು ಉತ್ತೇಜಿಸುವುದು.

6. ಸಮುದಾಯದಲ್ಲಿ ಕ್ಯಾನ್ಸರ್ ಸಂಭವಿಸುವುದನ್ನು ಕಡಿಮೆ ಮಾಡಲು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವುದು.

7. ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಕ್ಯಾನ್ಸರ್ ತಡೆಗಟ್ಟುವಿಕೆಯ ಕಾರ್ಯತಂತ್ರಗಳನ್ನು ರೂಪಿಸಿ ಜಾರಿಗೊಳಿಸುವುದು.

8. ರೋಗಿಗಳು, ಕ್ಯಾನ್ಸರ್ ಆರೈಕೆ ವೃತ್ತಿಪರರು ಮತ್ತು ಉದ್ಯೋಗಿಗಳ ಅಗತ್ಯತೆಗಳು ಮತ್ತು ಮೌಲ್ಯಗಳಿಗೆ ಸ್ಪಂದಿಸುವ ಕ್ಯಾನ್ಸರ್ ಆರೈಕೆಯ ವಿತರಣೆಯಲ್ಲಿ ಅದ್ವಿತೀಯ ಗುಣಮಟ್ಟ ಮತ್ತು ಉತ್ಪಾದಕತೆಗಳನ್ನು ಸಾಧಿಸುವುದು.

9. ಗುಣಮಟ್ಟದ, ಸಮರ್ಥ ಮತ್ತು ರೋಗಿಕೇಂದ್ರಿತ ಆರೈಕೆಯನ್ನು ನೀಡಿ, ನಮ್ಮ ಪ್ರದೇಶದ ಕ್ಯಾನ್ಸರ್ ಆರೈಕೆಯ ಅಗತ್ಯತೆಗಳನ್ನು ಪೂರೈಸುವ ಮೂಲಕ ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮುವುದು.

ಮೌಲ್ಯಗಳು

ಗುಣಮಟ್ಟ : ಗುಣಮಟ್ಟದ ಸೇವೆಗಳನ್ನು ಬದ್ಧತೆಯಿಂದ ನೀಡುವ ಮೂಲಕ ಆರೈಕೆ ಬಯಸುವವರ ನಿರೀಕ್ಷೆಗಳನ್ನು ಮೀರಲು ಪ್ರಯತ್ನಿಸುವುದು.

ಸಹಾನುಭೂತಿ ಘನತೆ, ಕಾಳಜಿ, ದಯೆ ಮತ್ತು ಗೌರವಗಳೊಂದಿಗೆ ಸಮಗ್ರ ಆರೈಕೆಯನ್ನು ಒದಗಿಸುವುದು.

ತಂಡ-ಕಾರ್ಯ ವಿಶ್ವಾಸ, ಸಹಯೋಗ, ಮುಕ್ತತೆ ಮತ್ತು ಸಹಕಾರದ ವಾತಾವರಣವನ್ನು ಬೆಳೆಸುವ ತಂತ್ರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕಾರ್ಯಗತಗೊಳಿಸುವುದು.

ಸಮುದಾಯ ಸಂಬಂಧಗಳು ಸಮುದಾಯದ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ವೇಗದ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಅವರ ಅಗತ್ಯಗಳನ್ನು ಪೂರೈಸುವುದು.

ನಾಯಕತ್ವ : ಆಸ್ಪತ್ರೆಯಲ್ಲಿ ಕ್ಯಾನ್ಸರ್ ಆರೈಕೆಯ ಸುಧಾರಣೆಗೆ ಸಂಪನ್ಮೂಲಗಳನ್ನು ಉತ್ತಮಗೊಳಿಸುವುದು..

             

ಇತಿಹಾಸದ ಪ್ರಮುಖ ಮೈಲಿಗಲ್ಲುಗಳು

1957

ನಗರದ ಪುರಪಿತೃಗಳಿಗೆ ಇಂತಹ ಆಸ್ಪತ್ರೆಯೊಂದನ್ನು ಕಟ್ಟಿಸಬೇಕು ಎಂಬ ಪರಿಕಲ್ಪನೆ ಮೂಡಿತು.

1963

ಮಹಾತ್ಮಾ ಗಾಂಧಿ ರಸ್ತೆಯ ಬಳಿ ಪೆರೇಡ್ ಮೈದಾನದಲ್ಲಿ ಸ್ಥಾಪಿಸಲಾದ ಶಂಕುಸ್ಥಾಪನಾ ಶಿಲೆಯನ್ನು ನಂತರದಲ್ಲಿ, ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಪ್ರಸ್ತುತ ಸ್ಥಳಕ್ಕೆ ವರ್ಗಾಯಿಸಲಾಯಿತು.

1970

ಆಸ್ಪತ್ರೆಯ ಕಾರ್ಯಾರಂಭದ ಕುರಿತು ಯಾವುದೇ ಪ್ರಗತಿ ಕಂಡುಬಾರದ ಕಾರಣ, ಕರ್ನಾಟಕ ಸರ್ಕಾರವು ತನ್ನ ಸರ್ಕಾರೀ ಆದೇಶ ಸಂಖ್ಯೆ : ಎಚ್ಎಂಎ 84 ಎಂಡಿಎ 68, ದಿನಾಂಕ : 19 ನೇ ಫೆಬ್ರವರಿ 1970ರ ಅನ್ವಯ ಆಸ್ಪತ್ರೆ ಸ್ಥಾಪನಾ ಕಾರ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡಿತು.

1971

ಸರ್ಕಾರೀ ಆದೇಶ ಸಂಖ್ಯೆ: ಎಚ್‌.ಎಂ.ಎ. 213 MEN 70, ದಿನಾಂಕ 21 ಅಕ್ಟೋಬರ್ 1971ರ ಅನ್ವಯ ಹುದ್ದೆಗಳನ್ನು ಸೃಷ್ಟಿಸಿ ಅನುಮೋದನೆಯನ್ನು ನೀಡಲಾಯಿತು.

1972

1972ರ ಡಿಸೆಂಬರ್ 13ರಂದು ಕಟ್ಟಡದ ಮೊದಲ ಹಂತದ ನಿರ್ಮಾಣ ಪೂರ್ಣಗೊಂಡಿತು.

1973

ಬೆಂಗಳೂರಿನ ಬೆಂಗಳೂರು ವೈದ್ಯಕೀಯ ಕಾಲೇಜಿಗೆ ಸೇರಿದ ತಜ್ಞವೈದ್ಯರು, ಸಂದರ್ಶಕ ಪ್ರಾಧ್ಯಾಪಕರು ಮತ್ತು ಇತರ ವಿಶೇಷ ತಂತ್ರಜ್ಞರನ್ನು ಒಳಗೊಂಡ ಒಂದು ವಿಭಾಗವನ್ನು ರೇಡಿಯೋ ಡಯಾಗ್ನಸ್ಟಿಕ್ ಅಂಡ್ ರೇಡಿಯೇಷನ್ ಥೆರಪಿ ಹೆಸರಿನಲ್ಲಿ ಆರಂಭಿಸಲಾಯಿತು. ಇದರ ಜೊತೆಗೆ, ಹೊರರೋಗಿ ವಿಭಾಗ ಮತ್ತು 50 ಹಾಸಿಗೆಗಳುಳ್ಳ ಒಳರೋಗಿ ವಿಭಾಗವನ್ನೂ ಸಹ ಪ್ರಾರಂಭಿಸಲಾಯಿತು.

1975

ಅಭಿವೃದ್ಧಿಯ ಎರಡನೇ ಹಂತದಲ್ಲಿ ; ಮುಖ್ಯ ಕಟ್ಟಡದಲ್ಲಿ ಒಳರೋಗಿ ವಿಭಾಗದ ನಿರ್ಮಾಣ ಕಾರ್ಯ ಮುಕ್ತಾಯಗೊಂಡು, ಪೂರ್ಣ-ಪ್ರಮಾಣದ ಕ್ಯಾನ್ಸರ್ ಸಂಸ್ಥೆಯ ಕಾರ್ಯಚಟುವಟಿಕೆಗಳು ಸುಸಂಘಟಿತವಾಗಿ ಮತ್ತು ಸಿಬ್ಬಂದಿ ಸಹಿತ ಹಲವು ವಿಭಾಗಗಳೊಂದಿಗೆ ಆರಂಭಗೊಂಡಿತು. 1975ರ ಡಿಸೆಂಬರ್ ನಲ್ಲಿ ಆಡಳಿತಾತ್ಮಕ ವಿಭಾಗ, ಹೊರಗಿನ ಕ್ಲಿನಿಕ್‌ಗಳು, ವಾರ್ಡ್‌ಗಳು ಮತ್ತು ಶಸ್ತ್ರಚಿಕಿತ್ಸಾಗಾರಗಳ ಸಂಕೀರ್ಣ ಮತ್ತು 150 ಹಾಸಿಗೆಗಳ ಸಾಮರ್ಥ್ಯವುಳ್ಳ ಒಳರೋಗಿ ವಿಭಾಗವು ಸಿದ್ಧಗೊಂಡು ಕಾರ್ಯಾರಂಭಗೊಂಡಿತು.

1975

ಅಭಿವೃದ್ಧಿಯ ಎರಡನೇ ಹಂತದಲ್ಲಿ ; ಮುಖ್ಯ ಕಟ್ಟಡದಲ್ಲಿ ಒಳರೋಗಿ ವಿಭಾಗದ ನಿರ್ಮಾಣ ಕಾರ್ಯ ಮುಕ್ತಾಯಗೊಂಡು, ಪೂರ್ಣ-ಪ್ರಮಾಣದ ಕ್ಯಾನ್ಸರ್ ಸಂಸ್ಥೆಯ ಕಾರ್ಯಚಟುವಟಿಕೆಗಳು ಸುಸಂಘಟಿತ ಮತ್ತು ಸಿಬ್ಬಂದಿ ಸಹಿತ ಹಲವು ವಿಭಾಗಗಳೊಂದಿಗೆ ಆರಂಭಗೊಂಡಿತು. 1975ರ ಡಿಸೆಂಬರ್ ನಲ್ಲಿ ಆಡಳಿತಾತ್ಮಕ ವಿಭಾಗ, ಹೊರಗಿನ ಕ್ಲಿನಿಕ್‌ಗಳು, ವಾರ್ಡ್‌ಗಳು ಮತ್ತು ಶಸ್ತ್ರಚಿಕಿತ್ಸಾಗಾರಗಳ ಸಂಕೀರ್ಣ ಮತ್ತು 150 ಹಾಸಿಗೆಗಳ ಸಾಮರ್ಥ್ಯವುಳ್ಳ ಒಳರೋಗಿ ವಿಭಾಗವು ಸಿದ್ಧಗೊಂಡು ಕಾರ್ಯಾರಂಭಗೊಂಡಿತು.

1976

ಹಾಸಿಗೆಗಳ ಸಂಖ್ಯೆಯನ್ನು 160ಕ್ಕೆ ಏರಿಸಲಾಯಿತು

1977

ಹಾಸಿಗೆಗಳ ಸಂಖ್ಯೆಯನ್ನು 180ಕ್ಕೆ ಏರಿಸಲಾಯಿತು

1978

ಹಾಸಿಗೆ ಸಾಮರ್ಥ್ಯವನ್ನು ಮತ್ತಷ್ಟು, ಅಂದರೆ,190ಕ್ಕೆ ಏರಿಸಲಾಯಿತು. ಮಾರ್ಚ್ 1978ರಲ್ಲಿ ಅಡುಗೆಮನೆಯ ಬ್ಲಾಕ್ ನಿರ್ಮಾಣ ಪೂರ್ಣಗೊಂಡಿತು ಮತ್ತು ಜೂನ್ 1978 ರಲ್ಲಿ ಲಾಂಡ್ರಿ ಮತ್ತು ನವೆಂಬರ್ 1978 ರಲ್ಲಿ ಶವಾಗಾರಗಳ ನಿರ್ಮಾಣ ಪೂರ್ಣಗೊಂಡಿತು.

1979

1979ರ ಏಪ್ರಿಲ್ ನಲ್ಲಿ ವಸತಿ ಸಂಕೀರ್ಣದ ನಿರ್ಮಾಣ ಕಾರ್ಯ ಪೂರ್ಣಗೊಂಡಿತು.ಶಸ್ತ್ರಚಿಕಿತ್ಸಾಗಾರ (ಆಪರೇಷನ್ ಥಿಯೇಟರ್), ಗ್ಯಾಸ್ ಮತ್ತು ಆಕ್ಸಿಜನ್ ಸರಬರಾಜು ವ್ಯವಸ್ಥೆ ಮತ್ತು ಶಸ್ತ್ರಚಿಕಿತ್ಸಾಗಾರದ ಕೇಂದ್ರೀಯ ಸಂಕೀರ್ಣವನ್ನು (ವಾತಾನುಕೂಲ ಸಹಿತ) ಮರುರೂಪಿಸಲಾಯಿತು. ಅಲ್ಲದೆ, ಹಲವಾರು ಪ್ರಯೋಗಾಲಯಗಳನ್ನು ಸಹ ಮರುರೂಪಿಸಲಾಯಿತು. (ಪೆಥಾಲಜಿ, ಮೈಕ್ರೋಬಯಾಲಜಿ, ಬಯೋಕೆಮಿಸ್ಟ್ರಿ, ಮತ್ತು ಸೈಟೋಜೆನೆಟಿಕ್).

 

              

 

           

 

 

 

   

 

                

 

 

 

ಇತ್ತೀಚಿನ ನವೀಕರಣ​ : 29-01-2022 10:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ - ಬೆಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080