ಅಭಿಪ್ರಾಯ / ಸಲಹೆಗಳು

ಕ್ಯಾನ್ಸರ್ ಚಿಹ್ನೆಗಳು - ರೋಗಲಕ್ಷಣಗಳು ಮತ್ತು ಅಪಾಯ ಸಂಭವನೀಯತೆ

 

ರೋಗ ಸೂಚನೆ ಹಾಗೂ ರೋಗ ಲಕ್ಷಣಗಳು  

ಕ್ಯಾನ್ಸರ್ ಅಪಾಯ ಸಂಭವನೀಯತೆಯನ್ನು ನಿರ್ವಹಿಸುವುದು 

ಸ್ತನ ಕ್ಯಾನ್ಸರ್ 

ಗರ್ಭಗೊರಳಿನ   ಕ್ಯಾನ್ಸರ್ 


                 

ರೋಗ ಸೂಚನೆ ಹಾಗೂ ರೋಗ ಲಕ್ಷಣಗಳು

1. 3 ವಾರಗಳಿಗಿಂತ ಹೆಚ್ಚು ಕಾಲ ಇರುವ ಬಾಯಿ ಅಥವಾ ನಾಲಿಗೆ ಹುಣ್ಣು

2. ಕೆಮ್ಮು ಅಥವಾ ಕೊಕ್ಕಿನ ಧ್ವನಿ 3 ವಾರಗಳಿಗಿಂತ ಹೆಚ್ಚು ಕಾಲ ಇರುತ್ತದೆ

3. ಕಸಿದುಕೊಳ್ಳುವ ತೊಂದರೆ ಅಥವಾ ಅಜೀರ್ಣವನ್ನು ಮುಂದುವರಿಸಿದೆ

4. ಉಸಿರುತನ

5. ರಕ್ತವನ್ನು ಕೆಮ್ಮುವುದು

6. ನಿಮ್ಮ ಸ್ತನಗಳ ಗಾತ್ರ, ಆಕಾರ ಅಥವಾ ಅನುಭವದ ಬದಲಾವಣೆಗಳು

7. ನಿಮ್ಮ ಸ್ತನಗಳ ಮೇಲೆ ಚರ್ಮದ ಯಾವುದೇ ಭಾರೀ, ಮಬ್ಬಾಗಿಸುವಿಕೆ ಅಥವಾ ಕೆಂಪು

8. ಮೊಲೆತೊಟ್ಟುಗಳ ಸ್ಥಾನದಲ್ಲಿ ಬದಲಾವಣೆ, ಒಂದು ದದ್ದು ಅಥವಾ ತೊಟ್ಟುಗಳ ಡಿಸ್ಚಾರ್ಜ್

9. ಋತುಬಂಧದ ನಂತರ ಅಥವಾ ಋತುಬಂಧದ ನಂತರ, ಲೈಂಗಿಕತೆಯ ನಂತರ ಯೋನಿಯ ರಕ್ತಸ್ರಾವ

10. ಸಾಮಾನ್ಯವಾಗಿ 4-6 ವಾರಗಳು ಅಥವಾ ಅದಕ್ಕೂ ಹೆಚ್ಚಿನ ಕಾಲ ಬಡವರ ಕರುಳಿನ ಚಲನೆ

11. ನಿಮ್ಮ ಮೂತ್ರದಲ್ಲಿ ರಕ್ತ

12. ಮೂತ್ರ ವಿಸರ್ಜನೆಯಲ್ಲಿ ತೊಂದರೆಗಳು

13. ಗಾತ್ರ, ಆಕಾರ ಅಥವಾ ಮೋಲ್ನ ಬಣ್ಣದಲ್ಲಿ ಬದಲಾವಣೆ

14. ವಿವರಿಸಲಾಗದ ನೋವು ಅಥವಾ ನೋವು 4 ವಾರಗಳಿಗಿಂತ ಹೆಚ್ಚು ಕಾಲ ಇರುತ್ತದೆ

15. ಅಸಾಮಾನ್ಯ ಭಾರೀ ಅಥವಾ ನಿಮ್ಮ ದೇಹದಲ್ಲಿ ಎಲ್ಲಿಯೂ ಊತ

16. ವಿವರಿಸಲಾಗದ ತೂಕ ನಷ್ಟ ಅಥವಾ ಭಾರೀ ರಾತ್ರಿ ಬೆವರುವಿಕೆ

17. ಹಲವಾರು ವಾರಗಳ ನಂತರ ಗುಣವಾಗದೇ ಇರುವ ನೋಯುತ್ತಿರುವ ನೋವು.                    

ಕ್ಯಾನ್ಸರ್ನ ಕಾರಣಗಳಿಗಾಗಿ ಅಪಾಯಕಾರಿ ಅಂಶಗಳು

ಕ್ಯಾನ್ಸರ್ ಕೋಶಗಳಿಗೆ ಸಾಮಾನ್ಯವಾದ ರೂಪಾಂತರದ ನಿಖರವಾದ ಕಾರಣ, ಅಂದರೆ ಅನೇಕ ಕ್ಯಾನ್ಸರ್ಗಳಿಗೆ ನಿರ್ದಿಷ್ಟ ಕಾರಣ ಇನ್ನೂ ತಿಳಿದಿಲ್ಲ. ಪರಿಸರೀಯ ಮತ್ತು ಆನುವಂಶಿಕ ಅಂಶಗಳೆರಡೂ ಒಳಪಟ್ಟಿವೆ. ಸಾಮಾನ್ಯ ಪರಿಸರ ಅಂಶಗಳು ಸೇರಿವೆ.

 

ತಂಬಾಕು

35%

ಹೆಚ್ಚು ವಿವರವಾಗಿನೋಡಿ

ಆಹಾರ

30%

ಹೆಚ್ಚು ವಿವರವಾಗಿ ನೋಡಿ

ಸೆಕ್ಸ್ ಮತ್ತು ಸಂತಾನೋತ್ಪತ್ತಿ

25%

ಹೆಚ್ಚು ವಿವರವಾಗಿ ನೋಡಿ

ಮಾಲಿನ್ಯ

4.5%

ಹೆಚ್ಚು ವಿವರವಾಗಿ ನೋಡಿ

ಅಯಾನೀಕರಿಸುವ ವಿಕಿರಣ

3%

ಹೆಚ್ಚು ವಿವರವಾಗಿ ನೋಡಿ

ಸೋಂಕುಗಳು

2%

ಹೆಚ್ಚು ವಿವರವಾಗಿ ನೋಡಿ

ಉದ್ಯೋಗ

2%

ಹೆಚ್ಚು ಆಳದಲ್ಲಿ ನೋಡಿ

                     

ಕ್ಯಾನ್ಸರ್ ಅಪಾಯ ಸಂಭವನೀಯತೆಯನ್ನು ನಿರ್ವಹಿಸುವುದು

1. ಪಕ್ಷಿನೋಟ

`ಕ್ಯಾನ್ಸರ್ ತಡೆಗಟ್ಟುವಿಕೆ’ ಎಂಬುದು ಕ್ಯಾನ್ಸರ್ ಸಂಭವಿಸುವ ಅಪಾಯವನ್ನು ಕಡಿಮೆಗೊಳಿಸಲು ತೆಗೆದುಕೊಳ್ಳುವ ಒಂದು ಕ್ರಮವಾಗಿದೆ.  ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು, ಕ್ಯಾನ್ಸರ್-ಉಂಟುಮಾಡುವ ವಸ್ತುಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು, ಮತ್ತು ಕ್ಯಾನ್ಸರ್ ಅನ್ನು ವೃದ್ಧಿಗೊಳ್ಳದಂತೆ ತಡೆಯುವ ಔಷಧಿಗಳು ಅಥವಾ ಲಸಿಕೆಗಳನ್ನು ತೆಗೆದುಕೊಳ್ಳುವುದು ಇವೆಲ್ಲವೂ ಸಹ ಇದರಲ್ಲಿ ಸೇರಿದೆ. 

2. ಕ್ಯಾನ್ಸರ್ ಅಪಾಯ ಸಂಭವನೀಯತೆಯ ಅಂಶಗಳು

ಒಬ್ಬ ವ್ಯಕ್ತಿಯು ಏಕೆ ಕ್ಯಾನ್ಸರ್ ಪೀಡಿತನಾಗುತ್ತಾನೆ ಮತ್ತು ಮತ್ತೊಬ್ಬ ವ್ಯಕ್ತಿಗೆ ಹಾಗೇನೂ ಆಗುವುದಿಲ್ಲವೇಕೆ? ಎಂಬುದನ್ನು ತಿಳಿದುಕೊಳ್ಳಲು ಸಾಮಾನ್ಯವಾಗಿ ಸಾಧ್ಯವಿಲ್ಲ.  ಆದರೆ, ಕೆಲವು ಅಪಾಯ ಸಂಭವನೀಯ ಅಂಶಗಳಿಗೆ ಈಡಾಗುವ ವ್ಯಕ್ತಿಗೆ ಕ್ಯಾನ್ಸರ್ ಉಂಟಾಗಬಹುದು ಎಂಬುದನ್ನು ಹಲವು ಸಂಶೋಧನಾ ವರದಿಗಳು ದೃಢಪಡಿಸಿವೆ. (ಕ್ಯಾನ್ಸರ್ ಉಂಟಾಗುವ ಅಪಾ ಸಂಭವನೀಯತೆ ಕಡಿಮೆ ಇರುವ ಅಂಶಗಳು ಸಹ ಇವೆ, ಇವುಗಳನ್ನು ಕೆಲವೊಮ್ಮೆ ಅಪಾಯ ಸಂಭವನೀಯತೆಯ ರಕ್ಷಣಾತ್ಮಕ ಅಂಶಗಳು, ಅಥವಾ ಹಾಗೆಯೇ`ರಕ್ಷಣಾತ್ಮಕ ಅಂಶಗಳು’ ಎಂದು ಕರೆಯಲಾಗುತ್ತದೆ.)

ಕ್ಯಾನ್ಸರ್ ನ ಅಪಾಯ ಸಂಭವನೀಯ ಅಂಶಗಳನ್ನು ಮತ್ತು ರಕ್ಷಣಾತ್ಮಕ ಅಂಶಗಳನ್ನು ಆರಂಭದಲ್ಲಿ ಸೋಂಕುಶಾಸ್ತ್ರ ಅಧ್ಯಯನದ ಮೂಲಕ ಗುರುತಿಸಲಾಗುತ್ತದೆ.  ಕ್ಯಾನ್ಸರ್ ಪಡೆಯುವ ಜನರು ಕೆಲವು ಹೆಚ್ಚುಕಡಿಮೆ ಒಂದೇ ರೀತಿಯಲ್ಲಿ ವರ್ತಿಸುವ ಸಾಧ್ಯತೆಯಿದೆ ಅಥವಾ ಆ ವಸ್ತುಗಳ ಒಡನಾಟವಿಲ್ಲದ ಜನರಿಗೆ ಹೋಲಿಸಿದಲ್ಲಿ ನಿರ್ದಿಷ್ಟ ವಸ್ತುಗಳೊಂದಿಗೆ ಒಡನಾಟವಿರುವ ಕೆಲವರಿಗೆ ಕ್ಯಾನ್ಸರ್ ಬರಬಹುದು ಎಂಬ ಅಂಶವನ್ನು ಇಂತಹ ಸಂಶೋಧನಾ ವರದಿಗಳು ತೋರಿಸಿಕೊಟ್ಟಿವೆ. ಅನೇಕ ಅಧ್ಯಯನಗಳು, ಅಪಾಯ ಸಂಭವನೀಯ ಅಂಶಗಳು ಮತ್ತು ಹೆಚ್ಚುತ್ತಿರುವ ಕ್ಯಾನ್ಸರ್‌ ರೋಗ ಇವುಗಳ ನಡುವಿನ ಒಂದು ರೀತಿಯ ಸಂಬಂಧವನ್ನು ಸೂಚಿಸಿ,  ಸಂಭವನೀಯ ಅಪಾಯಕಾರಿ ಅಂಶಗಳು ನಿಜವಾಗಿ ಕ್ಯಾನ್ಸರ್‌ಗೆ ಹೇಗೆ ಕಾರಣವಾಗಬಹುದು ಎಂಬುದನ್ನು ವಿವರಿಸಬಲ್ಲ ಸಾಧ್ಯತಾ ಕಾರ್ಯವಿಧಾನವು ಅಸ್ತಿತ್ವಕ್ಕೆ ಬಂದಾಗ, ವಿಜ್ಞಾನಿಗಳು ಇವೆರಡರ ನಡುವಿನ ಸಂಬಂಧದ ಬಗ್ಗೆ ಹೆಚ್ಚು ವಿಶ್ವಾಸ ಗಳಿಸಬಹುದು. 

ತಂಬಾಕು ಸೇವನೆ                                 -               ಶೇಕಡಾ 35 ರಷ್ಟು

ಆಹಾರಪದ್ಧತಿ                                    -                ಶೇಕಡಾ 30 ರಷ್ಟು

ಲೈಂಗಿಕ ಕ್ರಿಯೆ ಮತ್ತು ಸಂತಾನೋತ್ಪತ್ತಿ      -                 ಶೇಕಡಾ 25 ರಷ್ಟು

ವಾಯು ಮಾಲಿನ್ಯ                              -                  ಶೇಕಡಾ 4.5 ರಷ್ಟು

ಐಯಾನೀಕರಣಗೊಂಡ ವಿಕಿರಣ             -                   ಶೇಕಡಾ 3 ರಷ್ಟು

ಸೋಂಕುಗಳು                                    -                    ಶೇಕಡಾ 2 ರಷ್ಟು

ಉದ್ಯೋಗ/ ವೃತ್ತಿ                               -                    ಶೇಕಡಾ 2 ರಷ್ಟು

ಸೂರ್ಯರಶ್ಮಿ/ ಅತಿನೇರಳೆ ಕಿರಣಗಳು       -                    ಶೇಕಡಾ 1 ರಷ್ಟು 

2.1 ತಂಬಾಕು ಸೇವನೆ ಸಂಬಂಧಿತ ಕ್ಯಾನ್ಸರ್

ತಂಬಾಕು ಸೇವನೆಗೆ (ತಂಬಾಕು ಸಂಬಂಧಿತ ಕ್ಯಾನ್ಸರ್ – ಟಿಆರ್‌ಸಿ) ಯೊಂದಿಗೆ ಸಂಬಂಧಿಸಿರುವ ಕ್ಯಾನ್ಸರ್‌ ತಗುಲಬಹುದಾದ ಅಂಗಗಳೆಂದರೆ : ತುಟಿ, ನಾಲಿಗೆ, ಬಾಯಿ, ಗಂಟಲುಕುಳಿ, (ಓರೊಫಾರ್ನೆಕ್ಸ್ ಮತ್ತು ಹೈಪೊಫಾರ್ನೆಕ್ಸ್ ಸೇರಿದಂತೆ), ಅನ್ನನಾಳ, ಧ್ವನಿನಾಳ, ಶ್ವಾಸಕೋಶ ಮತ್ತು ಮೂತ್ರಕೋಶ. ಈ ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಮಾಣವು ಪುರುಷರಲ್ಲಿ ಶೇಕಡಾ 34.6 ರಷ್ಟು, ಹೆಣ್ಣು ಮಕ್ಕಳಲ್ಲಿ ಶೇಕಡಾ 14.6 ರಷ್ಟುಬದಲಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್, ಅನ್ನನಾಳ ಮತ್ತು ನಾಲಿಗೆ ಮುಖ್ಯವಾಗಿ ಪುರುಷರಲ್ಲಿ ತಂಬಾಕು ಸಂಬಂಧಿತ ಕ್ಯಾನ್ಸರ್‌ಗಳಿಗೆ ಕೊಡುಗೆ ನೀಡುತ್ತದೆ; ಸ್ತ್ರೀಯರಲ್ಲಿ ತಂಬಾಕು ಸೇವನೆಗೆ ಸಂಬಂಧಿಸಿದಂತೆ, ಅನ್ನನಾಳ, ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗಳು ಪ್ರಧಾನವಾಗಿರುತ್ತವೆ. ತಂಬಾಕು ಸೇವನೆ ಸಂಬಂಧಿತ ಕ್ಯಾನ್ಸರ್‌ಗಳಲ್ಲಿ ಮಹಿಳೆಯರಿಗಿಂತ ಪುರುಷರಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. 

ಅಂಗಗಳು

ಪುರುಷರು

ಮಹಿಳೆಯರು

 

%

AAR

%

AAR

ತುಟಿ

0.3

0.14

0.9

0.18

ನಾಲಿಗೆ

12.1

4.82

6.6

1.45

ಬಾಯಿ

10.7

4.25

28.5

6.39

ಇತರೆ ಬಾಯಿಗಂಟಲಕುಳಿ

2.7

1.21

0.6

0.14

ಕೆಳಗಂಟಲಕುಳಿ

10

4.48

4.3

0.85

ಗಂಟಲಕುಳಿಯ ತುದಿ

2.3

1

1.7

0.37

ಅನ್ನನಾಳ

18.6

8.37

28.9

6.56

ಧ್ವನಿನಾಳ

9.1

4.08

2.4

0.53

ಶ್ವಾಸಕೋಶ

25.1

11.55

21.1

4.65

ಮೂತ್ರಕೋಶ

7.8

3.68

5

1.17

ತಂಬಾಕು ಸಂಬಂಧಿತ ಕ್ಯಾನ್ಸರ್

100

43.59

100

22.29

2.2 ಆಹಾರ

ಕಳೆದ ದಶಕದಲ್ಲಿ ನಡೆದ ವ್ಯಾಪಕವಾದ ಸಂಶೋಧನೆಗಳು ಕ್ಯಾನ್ಸರ್ ಎಂಬುದು ಅನೇಕ ಕಾರಣಗಳಿಂದ ಉಂಟಾಗುವ (ಬಹುಕಾರಣಜನ್ಯ) ರೋಗ ಎಂಬುದನ್ನು ತೋರಿಸಿಕೊಟ್ಟಿವೆ. ಜೀವಕೋಶಗಳ ಮೇಲೆ ಬೀಳುವ ಒತ್ತಡಗಳಿಂದಾಗಿ ಅವು ಅನಿಯಂತ್ರಿತವಾಗಿ ವರ್ತಿಸಿ ಉರಿಯೂತಕ್ಕೆ ಎಡೆಮಾಡಿಕೊಡುತ್ತದೆ ಮತ್ತು ಉರಿಯೂತದಿಂದಾಗಿ ಜೀವಕೋಶಗಳು ದ್ವಿಗುಣಗೊಳ್ಳುತ್ತಾ ಹೋಗುತ್ತವೆ. ಇವೆಲ್ಲಕ್ಕೂ ಅನೇಕ ಕಾರಣಗಳು ಇರುವುದರಿಂದ ಕ್ಯಾನ್ಸರ್ ಎಂಬುದು ಬಹುಕಾರಣಜನ್ಯವಾದುದು ಎಂಬುದನ್ನು ಅಧ್ಯಯನಗಳು ಬಹಿರಂಗಪಡಿಸಿವೆ. ತಂಬಾಕು ಮತ್ತು ಆಲ್ಕೋಹಾಲ್ ಬಳಕೆ, ಆಹಾರಪದ್ಧತಿ, ಪರಿಸರ ಮಾಲಿನ್ಯ, ವಿಕಿರಣ ಮತ್ತು ಸೋಂಕುಗಳಂತಹ ವಿವಿಧ ಜೀವನಪದ್ಧತಿಗೆ ಸಂಬಂಧಿಸಿದ ಅಂಶಗಳು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು ಮತ್ತು ಗೆಡ್ಡೆಗಳು ಉಂಟಾಗಲು (ಟ್ಯೂಮರಿಜೆನೆಸಿಸ್‌ಗೆ) ಕಾರಣವಾಗಬಹುದು ಎಂಬುದು ಕೂಡ ದೃಢಪಟ್ಟಿದೆ. ನಿರಂತರ ಉರಿಯೂತದಿಂದ ಉಂಟಾಗುವ ದೀರ್ಘಕಾಲದ ರೋಗಗಳಿಗೆ ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿದೆ ಹೊರತು ತೀವ್ರವಾದ ಚಿಕಿತ್ಸೆಯಲ್ಲ. ಪೌಷ್ಠಿಕಾಂಶಗಳು (ನ್ಯೂಟ್ರಾಸ್ಯುಟಿಕಲ್ಸ್), ಹಣ್ಣುಗಳು, ತರಕಾರಿಗಳು, ಮಸಾಲೆಗಳು ಮತ್ತು ಧಾನ್ಯಗಳಿಂದ ಪಡೆದ ಸಂಯುಕ್ತಗಳನ್ನು ಕಾಲಕಾಲಕ್ಕೆ ನಿರಂತರವಾಗಿ ಬಳಸಬಹುದು. ತೀವ್ರವಾದ ಉರಿಯೂತದ ಪರಿಣಾಮಗಳನ್ನು ನಿಷ್ಕ್ರಿಯಗೊಳಿಸಲು ಮತ್ತು ಕ್ಯಾನ್ಸರ್ ಅನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಪೌಷ್ಠಿಕ ಆಹಾರ ಸೇವನೆಯೇ ಮಾರ್ಗ. ಆಹಾರದಲ್ಲಿ ಇರುವ ಸಹಜ ಸ್ವಾಭಾವಿಕವಾದ ಕ್ಯಾನ್ಸರ್ ನಿವಾರಕ ಅಂಶಗಳು ಕ್ಯಾನ್ಸರ್‌ ರೋಗಕ್ಕೆ ಚಿಕಿತ್ಸಕ ಔಷಧಿಯಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ, ಪೌಷ್ಠಿಕ ಆಹಾರ ಸೇವನೆಯೇ ಕ್ಯಾನ್ಸರ್ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗೆ ಸೂಕ್ತ ಮಾರ್ಗ.  25 ಶತಮಾನಗಳ ಹಿಂದೆಯೇ ಹಿಪ್ಪೋಕ್ರೇಟ್ಸ್ ಎಂಬ ವೈದ್ಯವಿಜ್ಞಾನಿಯು 'ಆಹಾರವು ನಿಮ್ಮ ಔಷಧಿಯಾಗಿರಬೇಕು ಮತ್ತು ಔಷಧಿಯೇ ನಿಮ್ಮ ಆಹಾರವಾಗದಿರಲಿ' ಎಂದು ಘೋಷಿಸಿದ್ದುದು ಇದಕ್ಕೆ ಸಾಕ್ಷಿಯಾಗಿದೆ. 

2.3 ಅಕ್ರಿಲಾಮೈಡ್

ಅಕ್ರಿಲಾಮೈಡ್ ಎಂಬುದು ತಂಬಾಕಿನ ಹೊಗೆಯಲ್ಲಿ ಮತ್ತು ಕೆಲವು ಆಹಾರಗಳಲ್ಲಿ ಕಂಡುಬರುವ ರಾಸಾಯನಿಕವಾಗಿದೆ. ಆಲೂಗಡ್ಡೆ ಮುಂತಾದ ಕೆಲವು ತರಕಾರಿಗಳನ್ನು ಅಧಿಕ ತಾಪಮಾನದಲ್ಲಿ ಬಿಸಿಮಾಡಿದಾಗ (ಕರಿದಾಗ) ಇದು ಉತ್ಪತ್ತಿಯಾಗುತ್ತದೆ. ಅಕ್ರಿಲಾಮೈಡ್ ಸೇವನೆಯಿಂದ ಹಲವು ವಿಧಗಳ ಕ್ಯಾನ್ಸರ್ ಅಪಾಯ ಸಂಭವನೀಯತೆ ಹೆಚ್ಚಿಸುತ್ತದೆ ಎಂಬ ಆಂಶವು ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ದೃಢಪಟ್ಟಿದೆ. ಆದಾಗ್ಯೂ, ಮಾನವನು ಸೇವಿಸುವ ಆಹಾರದಲ್ಲಿರುವ ಅಕ್ರಿಲಾಮೈಡ್ ಸೇವನೆಯಿಂದ ಯಾವುದಾದರೊಂದು ವಿಧಧ ಕ್ಯಾನ್ಸರ್‌ ಉಂಟಾಗುವ ಅಪಾಯಗಳು ಇವೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. 

2.4  ಯ್ಯಾಂಟಿಆಕ್ಸಿಡೆಂಟ್ಸ್ (ಉತ್ಕರ್ಷಣ ನಿರೋಧಕಗಳು)

ಯಾಂಟಿಆಕ್ಸಿಡೆಂಟ್‌ಗಳು ಇತರ ರಾಸಾಯನಿಕಗಳ ಚಟುವಟಿಕೆಯನ್ನು ನಿರ್ಬಂಧಿಸುವ ರಾಸಾಯನಿಕಗಳಾಗಿವೆ, ಇದನ್ನು ಫ್ರೀ ರಾಡಿಕಲ್ ಎಂದು ಕರೆಯಲಾಗುತ್ತದೆ. ಇದು ಜೀವಕೋಶಗಳನ್ನು ಹಾನಿಗೊಳಿಸಬಹುದು. ಬಹಿಷ್ಕರಣೆಗೊಂಡ ಆಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್ ಉಂಟುಮಾಡಬಲ್ಲ ಫ್ರೀ ರಾಡಿಕಲ್ ಹಾನಿಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಪ್ರಯೋಗಾಲಯಗಳ ಮತ್ತು ಪ್ರಾಣಿಗಳ ಮೇಲೆ ಕೈಗೊಳ್ಳಲಾದ ಸಂಶೋಧನೆಗಳು ಬಹಿರಂಗಪಡಿಸಿವೆ. ಆದರೆ, ಮಾನವರ ಮೇಲೆ ನಡೆಸಿದ ಸಂಶೋಧನಾ ಅಧ್ಯಯನಗಳಲ್ಲಿ ಉತ್ಕರ್ಷಣ ನಿರೋಧಕ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಕ್ಯಾನ್ಸರ್‌ನಿಂದ ಉಂಟಾಗುವ ಅಪಾಯ ಅಥವಾ ಸಾಯುವ ಸಂಭವನೀಯತೆ ಕಡಿಮೆಗೊಳ್ಳುತ್ತದೆ ಎಂಬುದು ಸ್ಪಷ್ಟವಾಗಿ ಮನವರಿಕೆಯಾಗಿಲ್ಲ.  ಇದರಿಂದ ಹಲವು ರೀತಿಯ ಕ್ಯಾನ್ಸರ್ ಉಂಟಾಗುವ ಅಪಾಯಗಳೇ ಹೆಚ್ಚಾಗಿವೆ ಎಂಬುದನ್ನು ಕೆಲವು ಅಧ್ಯಯನಗಳು ತೋರಿಸಿವೆ. 

2.5 ಕೃತಕ ಸಿಹಿಕಾರಕಗಳು

ಸ್ಯಾಖರಿನ್, ಅಸ್ಪರ್ಟಮೆ, ಅಸಿಲ್ಸುಫೇಮ್ ಪೊಟ್ಯಾಸಿಯಮ್, ಸಕ್ರಾಲೋಸ್, ನೊಟೇಮ್ ಮತ್ತು ಸೈಕ್ಲಾಮೆಟ್ ಸೇರಿದಂತೆ ಹಲವಾರು ಕೃತಕ ಸಿಹಿಕಾರಕಗಳ ಸುರಕ್ಷತೆ ಕುರಿತಾಗಿ ಹಲವು ಅಧ್ಯಯನಗಳು ನಡೆದಿವೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಾಣಿಜ್ಯಿಕವಾಗಿ ಲಭ್ಯವಾಗುವ ಕೃತಕ ಸಿಹಿಕಾರಕಗಳು ಮಾನವರಲ್ಲಿ ಕ್ಯಾನ್ಸರ್ ಉಂಟುಮಾಡುವ ಅಪಾಯಗಳಿವೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿಲ್ಲ. 

2.6 ಕ್ಯಾಲ್ಸಿಯಂ

ಕ್ಯಾಲ್ಸಿಯಂ ಎಂಬುದು ಆಹಾರ ಮತ್ತು ಪೂರಕ ಆಹಾರಗಳಿಂದ ಪಡೆಯಬಹುದಾದ ಅತ್ಯಗತ್ಯ `ಆಹಾರ-ಖನಿಜ’ವಾಗಿದೆ. ಕ್ಯಾಲ್ಸಿಯಂ  ಅನ್ನು ಹೆಚ್ಚುಹೆಚ್ಚು ಸೇವಿಸುವುದರಿಂದ ಗುದದ್ವಾರ ಮತ್ತು ಗುದನಾಳದ (ಕೊಲೊರೆಕ್ಟಲ್) ಕ್ಯಾನ್ಸರ್ ಅಪಾಯ ಸಂಭನೀಯತೆ ಕಡಿಮೆಯಾಗುತ್ತದೆ ಎಂಬುದು ಹಲವಾರು ಅಧ್ಯಯನಗಳ ಒಟ್ಟಾರೆ ಸಾರಾಂಶವಾಗಿದೆ. ಆದರೆ, ಅಧ್ಯಯನಗಳ ಫಲಿತಾಂಶಗಳು ಎಲ್ಲ ಸಂದರ್ಭಗಳಲ್ಲಿ ಸ್ಥಿರವಾಗಿಲ್ಲ. 

2.7 ಫ್ಲೋರೈಡ್

ನೀರಿನ ಫ್ಲೋರೈಡ್ ದಂತಕ್ಷಯವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಫ್ಲೋರೈಡ್ ದಂತಕ್ಷಯವನ್ನು ನಿವಾರಿಸಲೂಬಹುದು. ಹಲವಾರು ಅಧ್ಯಯನಗಳು ಫ್ಲೂರೈಡೀಕರಿಸಿದ ನೀರು ಮತ್ತು ಕ್ಯಾನ್ಸರ್ ಅಪಾಯಗಳ ನಡುವೆ ಯಾವುದೇ ಸಂಬಂಧವನ್ನು ತೋರಿಸಲಿಲ್ಲ. ಫ್ಲೋರೈಡ್‌ಯುಕ್ತ ನೀರು ಸೇವನೆಗೂ ಮತ್ತು ಕ್ಯಾನ್ಸರ್ ಉಂಟಾಗುವುದಕ್ಕೂ ಯಾವುದೇ ರೀತಿಯ ಸಂಬಂಧಗಳಿಲ್ಲ ಎಂಬ ಅಂಶವನ್ನು ಮಾನವರು ಮತ್ತು ಪ್ರಾಣಿಗಳ ಮೇಲೆ ಮಾಡಲಾದ ಸಂಶೋಧನಾ ಅಧ್ಯಯನಗಳು ತಿಳಿಸುತ್ತವೆ. 

2.8 ಆಲ್ಕೋಹಾಲ್

ಅಧ್ಯಯನದ ಪ್ರಕಾರ, ಆಲ್ಕೊಹಾಲ್ ಸೇವನೆಯಿಂದ ಹಲವು ಅಂಗಗಳಿಗೆ ಕ್ಯಾನ್ಸರ್‌ ಸಂಭವಿಸುವ ಅಪಾಯ ಹೆಚ್ಚಾಗಿರುವುದು ದೃಢಪಟ್ಟಿದೆ. ಆಲ್ಕೋಹಾಲ್‌ನ ಹೆಚ್ಚಿನ ಸೇವನೆಯಿಂದ ಬಾಯಿ, ಗಂಟಲು, ಅನ್ನನಾಳ, ಧ್ವನಿಪೆಟ್ಟಿಗೆ, ಪಿತ್ತಜನಕಾಂಗ, ಮತ್ತು ಸ್ತನ ಕ್ಯಾನ್ಸರ್‌ ಉಂಟಾಗಬಹುದು.  ನೀವು ಹೆಚ್ಚುಹೆಚ್ಚು ಕುಡಿದಷ್ಟೂ, ಅಪಾಯ ಸಂಭವನೀಯತೆ ಹೆಚ್ಚುತ್ತದೆ. ಆಲ್ಕೋಹಾಲ್ ಸೇವಿಸುವವರು ಮತ್ತು ಅದರ ಜೊತೆಜೊತೆಗೆ ತಂಬಾಕು ಸೇವಿಸುವವರಲ್ಲಿ ಕ್ಯಾನ್ಸರ್ ಉಂಟಾಗುವ ಅಪಾಯಗಳು ತುಂಬಾ ಹೆಚ್ಚಾಗಿರುತ್ತವೆ. 

2.9 ಬೆಳ್ಳುಳ್ಳಿ

ಬೆಳ್ಳುಳ್ಳಿ ಸೇವನೆಯಿಂದ ಹಲವು ವಿಧದ ಕ್ಯಾನ್ಸರ್‌ಗಳಿಂದ ದೂರ ಉಳಿಯಬಹುದು. ಬೆಳ್ಳುಳ್ಳಿ ಅನೇಕ ರೀತಿಯ ಕ್ಯಾನ್ಸರ್ ಗಳನ್ನು ವಿಶೇಷವಾಗಿ ಜೀರ್ಣಾಂಗವ್ಯೂಹದ ಕ್ಯಾನ್ಸರ್‌ಗಳ ಸಂಭವನೀಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ  ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ಹಾಗಿದ್ದೂ, ಇದಕ್ಕೆ ಖಚಿತವಾದ ಸಾಕ್ಷ್ಯಗಳು ಇಲ್ಲ. 

2.10 ಚಹಾ (ಟೀ)

ಚಹಾವು ಪಾಲಿಫೀನಾಲ್ ಸಂಯುಕ್ತಗಳನ್ನು ಹೊಂದಿದೆ, ವಿಶೇಷವಾಗಿ ಅದರಲ್ಲಿ ಕ್ಯಾಟೆಚಿನ್‌ಗಳಿವೆ. ಇವು ಉತ್ಕರ್ಷಣ ನಿರೋಧಕಗಳು (ಯ್ಯಾಂಟಿಆಕ್ಸಿಡೆಂಟ್‌ಗಳು) ಚಹಾ ಸೇವನೆ ಮತ್ತು ಕ್ಯಾನ್ಸರ್ ಬರುವ ಅಪಾಯ ಇವುಗಳ ನಡುವಿನ ಸಂಬಂಧವನ್ನು ಪರಿಶೀಲಿಸುವ ಸೋಂಕುಶಾಸ್ತ್ರೀಯ ಅಧ್ಯಯನಗಳ ಫಲಿತಾಂಶಗಳು ಅನಿಶ್ಚಿತವಾಗಿದ್ದು, ನಿರ್ಣಾಯಕ ಎನ್ನಲಾಗಿಲ್ಲ. ಚಹಾ ಸೇವನೆ ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆಯ ಕುರಿತಾಗಿ ಕೆಲವು ವೈದ್ಯಕೀಯ (ಕ್ಲಿನಿಕಲ್) ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಇವುಗಳ ಫಲಿತಾಂಶಗಳು ಸಹ ಅನಿಶ್ಚಿತವಾಗಿವೆ. 

2.11 ವಿಟಮಿನ್ ಡಿ

ದೇಹವು ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಅನ್ನು ಬಳಸಿ ಬಲವಾದ ಎಲುಬುಗಳು ಮತ್ತು ಹಲ್ಲುಗಳನ್ನು ತಯಾರಿಸಲು ವಿಟಮಿನ್ ಡಿ ಸಹಾಯಕ. ಪ್ರಾಥಮಿಕವಾಗಿ,  ಸೂರ್ಯನ ಬೆಳಕಿಗೆ ಚರ್ಮವನ್ನು ಒಡ್ಡಿಕೊಳ್ಳುವುದರ ಮೂಲಕ ವಿಟಮಿನ್ ಡಿ ಅನ್ನು ಪಡೆಯಲಾಗುತ್ತದೆ, ಆದರೆ, ಇದನ್ನು ಕೆಲವು ಆಹಾರ ಪದಾರ್ಥಗಳು ಮತ್ತು ಪೂರಕ ಆಹಾರವಸ್ತುಗಳಿಂದ ಪಡೆಯಬಹುದು. ರಕ್ತದಲ್ಲಿನ ವಿಟಮಿನ್ ಡಿ ಅಥವಾ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಸೇವನೆಯು ಕೊಲೊರೆಕ್ಟಲ್ ಕ್ಯಾನ್ಸರ್‌ ಬರುವ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ಮನುಷ್ಯರಲ್ಲಿ ಸೋಂಕುಶಾಸ್ತ್ರದ ಅಧ್ಯಯನಗಳು ಸೂಚಿಸಿವೆ. ಆದರೆ, ಅಲ್ಲಲ್ಲಿ ನಡೆಸಲಾದ ಅಧ್ಯಯನದ ಫಲಿತಾಂಶಗಳು ಅನಿರ್ದಿಷ್ಟವಾಗಿವೆ. 

2.12 ವಯಸ್ಸು

ರೋಗನಿರ್ಣಯದ  ವಿಚಾರದಲ್ಲಿ  ಗರಿಷ್ಠ ವಯೋಮಾನದ ಗುಂಪು ಎಂದರೆ, ಅದು ಪುರುಷರಲ್ಲಿ 60-64 ವರ್ಷಗಳು ಮತ್ತು ಮಹಿಳೆಯರಲ್ಲಿ 45-49 ವರ್ಷಗಳು.

ವಯೋಮಾನದ ಗುಂಪು

ಪುರುಷರು

ಮಹಿಳೆಯರು

ಒಟ್ಟು

ಶೇಕಡಾ

ಶೇಕಡಾ

ಶೇಕಡಾ

0-4

2.1

1.2

1.6

5-9

2.2

1

1.5

10-14

1.8

1.3

1.5

15-19

2

1

1.4

20-24

1.8

1.6

1.7

25-29

2.5

3.2

2.9

30-34

3.7

5

4.4

35-39

5.1

8.1

6.8

40-44

6.6

9.8

8.4

45-49

9.2

14.7

12.2

50-54

12.4

13.3

12.9

55-59

12.4

11.8

12.1

60-64

13.3

10.7

11.9

65-69

11.1

8.3

9.5

70-74

7.6

5.3

6.3

75+

6.1

3.6

4.7

ಒಟ್ಟು

100

100

100

2.13 ಜೀವನ

ಉದ್ಯೋಗ/ ವೃತ್ತಿ

ಆಹಾರ ಪದ್ಧತಿ.

ಅಭ್ಯಾಸಗಳು

ನೈರ್ಮಲ್ಯ

ಒತ್ತಡ. 

2.14 ಅನುವಂಶೀಯತೆ

ವಂಶವಾಹಿನಿಗಳು (ಜೀನ್ಸ್)

ಕ್ಯಾನ್ಸರ್ ಕುಟುಂಬಗಳು 

2.15  ಸಾಮಾನ್ಯ ಮುನ್‌ಸೂಚನೆಗಳು ಮತ್ತು ಕ್ಯಾನ್ಸರ್ ಲಕ್ಷಣಗಳು

1.  3 ವಾರಗಳಿಗಿಂತ ಹೆಚ್ಚು ಕಾಲ ಇರುವ ಬಾಯಿ ಅಥವಾ ನಾಲಿಗೆ ಹುಣ್ಣು

2.  3 ಗಂಟೆಗಳಿಗಿಂತಲೂ ಹೆಚ್ಚು ಕಾಲ ಇರುವ ಕೆಮ್ಮು ಅಥವಾ ಧ್ವನಿಯಲ್ಲಿನ ಒರಟುತನ (ಗೊಗ್ಗರು ಧ್ವನಿ)

3.  ನುಂಗುವಲ್ಲಿ ತೊಂದರೆ

4.  ಆಗಾಗ್ಗೆ ಉಂಟಾಗುವ ಅಜೀರ್ಣ

5.  ಉಸಿರಾಟದಲ್ಲಿ ತೊಂದರೆ

6.  ಕೆಮ್ಮಿದಾಗ ರಕ್ತಬೀಳುವುದು.

7.  ಸ್ತನಗಳ ಗಾತ್ರ, ಆಕಾರ ಅಥವಾ ಸ್ಪರ್ಷ ಇವುಗಳಲ್ಲಿ ಉಂಟಾಗುವ ಬದಲಾವಣೆ

8.  ಸ್ತನದಲ್ಲಿ ಯಾವುದೇ ರೀತಿಯ ಗೆಡ್ಡೆ, ಸ್ತನಗಳ ಚರ್ಮವು ಗಾಢವಾಗಿ ಮಬ್ಬಾಗುವುದು ಅಥವಾ ಕೆಂಪುಬಣ್ಣಕ್ಕೆ ತಿರುಗುವುದು.

9.  ಸ್ತನತೊಟ್ಟುಗಳ ಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಗಳು, ಒಂದು ಗುಳ್ಳೆ (ದದ್ದು) ಅಥವಾ ತೊಟ್ಟುಗಳಿಂದ ದ್ರವರೀತಿಯ ಯಾವುದೇ ಸ್ರಾವ.

10. ಸಂಭೋಗದ ನಂತರ ಯೋನಿಯಿಂದ ರಕ್ತಸ್ರಾವ, ಎರಡು ಋತುಚಕ್ರಗಳ ನಡುವೆ ಅಥವಾ ಋತುಚಕ್ರದ ಅವಧಿ ಮೀರಿದ ನಂತರದ ರಕ್ತಸ್ತ್ರಾವ.

11. ಮಲಮೂತ್ರ ವಿಸರ್ಜನೆಯನ್ನು ಉಂಟಾಗುವ ವ್ಯತ್ಯಾಸ / ಮಲದಲ್ಲಿ ರಕ್ತ ಹೋಗುವುದು/ ಮಲ ಕಪ್ಪಾಗಿ ಹೋಗುವುದು.

12. ಮೂತ್ರ ವಿಸರ್ಜನೆಯಲ್ಲಿನ ತೊಂದರೆಗಳು - ನೋವು ಉಂಟಾಗುವುದು, ರಕ್ತ ಹೋಗುವುದು, ಉರಿ ಉಂಟಾಗುವ ತೊಂದರೆ.

13. ಹುಟ್ಟುಮಚ್ಚೆ ಅಥವಾ ನರಹುಲಿಗಳ ಗಾತ್ರ, ಆಕಾರ ಅಥವಾ ಬಣ್ಣದಲ್ಲಿ ಉಂಟಾಗುವ ಬದಲಾವಣೆ.

14. ದೇಹದಲ್ಲಿ ಎಲ್ಲಿಯಾದರೂ ಇರುವ ಹೇಳಿಕೊಳ್ಳಲಾಗದ ನೋವು, ಪದೇಪದೇ ಬರುವ ನೋವು.

15. ದೇಹದ ಮೇಲೆ ಯಾವುದೇ ಭಾಗದಲ್ಲಿ ಉಂಟಾಗುವ ಅಸಹಜ ಗಂಟು, ಗೆಡ್ಡೆ ಅಥವಾ ಊತ

16. ಕಾರಣವಿಲ್ಲದೇ ಇಳಿಯುತ ದೇಹತೂಕ ಅಥವಾ ರಾತ್ರಿ ಸಮಯದಲ್ಲಿ ಹೆಚ್ಚುಹೆಚ್ಚು ಬೆವರುವಿಕೆ.

17. ದೀರ್ಘಕಾಲ ವಾಸಿಯಾಗದ, ನೋಯುತ್ತಿರುವ ಹುಣ್ಣು.

18. ದೀರ್ಘಕಾಲದವರೆಗೆ ಕಾರಣವಿಲ್ಲದೆ ಕಾಡುವ ಜ್ವರ. 

                         

ಸ್ತನ ಕ್ಯಾನ್ಸರ್

ದೇಹದಲ್ಲಿನ ಜೀವಕೋಶಗಳು ನಿಯಂತ್ರಣವಿಲ್ಲದೇ ಬೆಳೆಯುವುದನ್ನೇ ಕ್ಯಾನ್ಸರ್ ರೋಗ ಎನ್ನಲಾಗಿದೆ. ಸ್ತನದಲ್ಲಿ ಕ್ಯಾನ್ಸರ್ ಪ್ರಾರಂಭವಾದರೆ ಅದನ್ನು ಸ್ತನ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಚರ್ಮದ ಕ್ಯಾನ್ಸರ್ ಹೊರತುಪಡಿಸಿ, ನಗರ ಪ್ರದೇಶದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚು ಸಾಮಾನ್ಯವಾಗಿರುವ ಕ್ಯಾನ್ಸರ್ ಆಗಿದೆ. ಸ್ತನ ಕ್ಯಾನ್ಸರ್ ತಪಾಸಣೆ (ಸ್ಕ್ರೀನಿಂಗ್) ಎಂದರೆ ಮಹಿಳೆಯ ಸ್ತನಗಳಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬರುವ ಮುನ್ನವೇ ಕ್ಯಾನ್ಸರ್‌ ಇರುವುದರ ಕುರಿತಾಗಿ ಪರೀಕ್ಷಿಸುವುದು.  ಮಮೊಗ್ರಾಮ್‌ ಎಂಬುದು ಸ್ತನದ ಕ್ಷ-ಕಿರಣ ಚಿತ್ರವಾಗಿದೆ. ರೋಗಲಕ್ಷಣಗಳು ಕಂಡುಬರುವ ಮುನ್ನ ಪತ್ತೆಹಚ್ಚಿದರೆ ಕ್ಯಾನ್ಸರ್‌ ಚಿಕಿತ್ಸೆ ಸುಲಭವಾಗುತ್ತದೆ, ಸ್ತನ ಕ್ಯಾನ್ಸರ್ ಅನ್ನು ಆರಂಭದಲ್ಲಿಯೇ ಕಂಡುಕೊಳ್ಳಲು ಈ ಮೊಮೊಗ್ರಾಮ್‌ಗಳು ಉತ್ತಮ ಅವಕಾಶವನ್ನು ಒದಗಿಸುತ್ತವೆ. 50 ರಿಂದ 74 ವರ್ಷ ವಯಸ್ಸಿನ ಹೆಚ್ಚಿನ ಮಹಿಳೆಯರು ಪ್ರತಿ ಎರಡು ವರ್ಷಗಳಿಗೊಮ್ಮೆ ಮೆಮೋಗ್ರಾಮ್‌ ಪರೀಕ್ಷೆಗೆ ಒಳಗಾಗಬೇಕು. ನೀವು 40 ರಿಂದ 49 ವರ್ಷ ವಯಸ್ಸಿನವರಾಗಿದ್ದರೆ ಅಥವಾ ನೀವು ಸ್ತನ ಕ್ಯಾನ್ಸರ್‌ಗೆ ಒಳಗಾಗುವ ಹೆಚ್ಚಿನ ಅಪಾಯವನ್ನು ಹೊಂದಿರಬಹುದು ಎಂದು ಭಾವಿಸಿದರೆ, ಮಮೊಗ್ರಾಮ್‌ ತಪಾಸಣೆಯನ್ನು ಯಾವಾಗೆಲ್ಲಾ ಮಾಡಿಸಬೇಕು ಎಂಬುದನ್ನು ನಿಮ್ಮ ವೈದ್ಯರಲ್ಲಿ ವಿಚಾರಿಸಿರಿ. ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಸಾಮಾನ್ಯ ಕ್ಯಾನ್ಸರ್ ಆಗಿದ್ದು, ಭಾರತದ ಎಲ್ಲ ನಗರ ದಾಖಲಾತಿಗಳೂ, 2015 ರ ವರ್ಷದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಸ್ತನ ಕ್ಯಾನ್ಸರ್ ಘಟನೆಗಳು ಸಂಭವಿಸಿರುವುದನ್ನು ದಾಖಲಿಸಿವೆ. 

3.1 ಕೆಲವು ವಿಷಯಗಳು ನಿಮ್ಮ ಕ್ಯಾನ್ಸರ್‌ ಅಪಾಯ ಸಂಭವನೀಯತೆಯನ್ನು ಹೆಚ್ಚಿಸಬಹುದು

1. ಅಪಾಯ ಸಂಭವನೀಯ ಅಂಶಗಳಿಗೆ ನೀವು ತೆರೆದುಕೊಂಡಿದ್ದರೆ, ನಿಮಗೆ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯಿದೆ.

2. ನಿಮ್ಮ ಅಪಾಯ ಸಂಭವನೀಯತೆಯನ್ನು ಕಡಿಮೆ ಮಾಡಲು ಮತ್ತು ಆರಂಭಿಕ ತಪಾಸಣೆಗಾಗಿ ನಿಮ್ಮ ವೈದ್ಯರೊಂದಿಗೆ  ಮಾತನಾಡಿ.

3.2 ಸಂತಾನೋತ್ಪತ್ತಿಯಲ್ಲಿನ  ಅಪಾಯ ಸಂಭವನೀಯ ಅಂಶಗಳು

1. ಚಿಕ್ಕ ವಯಸ್ಸಿನಲ್ಲಿಯೇ ಋತುಮತಿಯಾಗುವುದು.

2. ಹೆಚ್ಚು ವಯಸ್ಸಾದ ಮೇಲ ಮೊದಲ ಮಗುವಿಗೆ ಜನ್ಮನೀಡುವುದು.

3. ಹೆಚ್ಚು ವಯಸ್ಸಾದ ನಂತರದಲ್ಲಿ ಋತುಚಕ್ರ ನಿಲ್ಲುವುದು.

4. ದೀರ್ಘಕಾಲದವರೆಗೆ ಹಾರ್ಮೋನು ಬದಲಿ ಚಿಕಿತ್ಸೆಯನ್ನು ಪಡೆಯುವುದು.

3.3 ಇತರೆ ಅಪಾಯ ಸಂಭವನೀಯ ಅಂಶಗಳು

1. ಹಿಂದಿನ ಸ್ತನ ಕ್ಯಾನ್ಸರ್‌ ಇತಿಹಾಸ, ಅಂದರೆ, ದಪ್ಪ ಸ್ತನಗಳು, ಅಥವಾ ಇನ್ನಿತರ

2. ಸ್ತನ ಸಮಸ್ಯೆಗಳಿರುವುದು.

3. ಸ್ತನ ಕ್ಯಾನ್ಸರ್‌ನ ಕೌಟುಂಬಿಕ ಇತಿಹಾಸ (ಪೋಷಕರು, ಸಹೋದರರು ಅಥವಾ ಮಗು).

4. ಪದೇಪದೇ ಎದೆಯ ಭಾಗದ ವಿಕಿರಣಕ್ಕೆ ಒಳಗಾಗುವುದು  (ಎದೆಯ ಕ್ಷ-ಕಿರಣ).

5. ತೂಕ ಹೆಚ್ಚಾಗುವುದು. ವಿಶೇಷವಾಗಿ, ಋತುಚಕ್ರ ನಿಂತ ನಂತರ. 

3.4 ರೋಗಲಕ್ಷಣಗಳು

ಸ್ತನ ಕ್ಯಾನ್ಸರ್‌ನ ಕೆಲವು ಮುನ್ಸೂಚನೆಗಳು ಹೀಗಿವೆ :

1.  ಸ್ತನದಲ್ಲಿ ಒಂದು ಗೆಡ್ಡೆ ಅಥವಾ ನೋವು.

2. ಸ್ತನದ ಒಂದು ಭಾಗ ದಪ್ಪವಾಗುವುದು ಅಥವಾ ಊದಿಕೊಳ್ಳುವುದು.

3. ಸ್ತನ ಚರ್ಮದ ತುರಿಕೆ ಅಥವಾ ಬಣ್ಣದಲ್ಲಿ ಮಬ್ಬಾಗುವುದು.

4. ಸ್ತನದ ಮೇಲೆ ಕೆಂಪು ಅಥವಾ ಚಕ್ಕೆ ಎದ್ದ ಚರ್ಮ.

5. ಸ್ತನ ತೊಟ್ಟಿನ ಸುತ್ತಲಲ್ಲಿ ಅಥವಾ ಸ್ತನತೊಟ್ಟುಗಳಲ್ಲಿ ಸೆಳೆತದ

6. ಎದೆಹಾಲಿನ ಹೊರತಾಗಿ ಸ್ತನತೊಟ್ಟುಗಳಿಂದ ಸ್ರವಿಸುವ ದ್ರವಪದಾರ್ಥ, ವಿಶೇಷವಾಗಿ, ರಕ್ತ.

7. ಸ್ತನದ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ.

3.5 ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡಲು ನಾನು ಏನು ಮಾಡಬಹುದು?

1. ಆರೋಗ್ಯಕರ ದೇಹತೂಕ ಇರಿಸಿಕೊಳ್ಳಬೇಕು.

2. ನಿಯಮಿತವಾಗಿ ವ್ಯಾಯಾಮ ಮಾಡಿ (ವಾರಕ್ಕೆ ಕನಿಷ್ಠ ನಾಲ್ಕು ಗಂಟೆಗಳ ಕಾಲ).

3. ಆಲ್ಕಹಾಲ್ ಅಥವಾ ಮಿತಿಮೀರಿದ ಆಲ್ಕೊಹಾಲ್‌ ಇರುವ ಪಾನೀಯಗಳನ್ನು ತಪ್ಪಿಸಿ.

4. ಕ್ಯಾನ್ಸರ್ ಉಂಟುಮಾಡುವ (ಕಾರ್ಸಿನೋಜೆನ್ಸ್) ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ.

5. ಮ್ಯಾಮೋಗ್ರಾಮ್‌, ಕ್ಷ-ಕಿರಣ, ಸೀಟಿ ಸ್ಯಾನ್‌ಗಳು ಮತ್ತು ಪೆಟ್‌ ಸ್ಯಾನ್‌ಗಳಂತಹ ವೈದ್ಯಕೀಯ ಪರೀಕ್ಷೆಗಳ ಸಂದರ್ಭದಲ್ಲಿ ಆದಷ್ಟೂ ಕಡಿಮೆ ವಿಕರಣಗಳಿಗೆ ಒಳಗಾಗುವ ಪ್ರಯತ್ನಗಳನ್ನು ಮಾಡಿ.

6. ಹಾರ್ಮೋನ್‌ ಬದಲಾವಣೆ ಚಿಕಿತ್ಸೆಯನ್ನು ಪಡೆದುಕೊಳ್ಳಲು ಅಥವಾ ಗರ್ಭನಿರೋಧಕ ಗುಳಿಗೆಗಳ (ಜನನ ನಿಯಂತ್ರಣ ಮಾತ್ರೆಗಳು) ಸೇವನೆ ಮಾಡಲು ನಿಮಗೆ ಹೇಳಲಾಗಿದ್ದರೆ, ಅದರಲ್ಲಿನ ಸಂಭವನೀಯ ಅಪಾಯಗಳ ಕುರಿತು ನಿಮ್ಮ ವೈದ್ಯರಲ್ಲಿ ವಿಚಾರಿಸಿ.

7. ಅಪಾಯ ಸಂಭನೀಯತೆ ಕಡಿಮೆಗೊಳಿಸಲು ನಿಮ್ಮ ಮಗುವಿಗೆ ಎದೆಹಾಲುಣಿಸಿ. 

ಕ್ಯಾನ್ಸರ್ ಸುರಕ್ಷಾ ಅಂಶಗಳು

ಮಲ್ಟಿವಿಟಮಿನ್ ಮತ್ತು ಖನಿಜಯುಕ್ತ ಪೂರಕಗಳನ್ನು ಅಥವಾ ಏಕ ವಿಟಮಿನ್ಗಳು ಅಥವಾ ಖನಿಜಗಳನ್ನು ಕ್ಯಾನ್ಸರ್ ತಡೆಗಟ್ಟಲು ಸಾಕಷ್ಟು ಸಾಕ್ಷ್ಯಗಳಿಲ್ಲ. ಈ ಕೆಳಗಿನ ಜೀವಸತ್ವಗಳು ಮತ್ತು ಖನಿಜ ಪೂರಕಗಳನ್ನು ಅಧ್ಯಯನ ಮಾಡಲಾಗಿದೆ, ಆದರೆ ಕ್ಯಾನ್ಸರ್ ಅಪಾಯವನ್ನು ಕಡಿಮೆಗೊಳಿಸಲಾಗಿಲ್ಲ (ಲಿಂಕ್: ಕ್ಯಾನ್ಸರ್ ತಡೆಯುವ ಆಹಾರ)

1. ಜೀವಸತ್ವ B6

2. ವಿಟಮಿನ್ ಬಿ 12

3. ವಿಟಮಿನ್ ಇ

4. ವಿಟಮಿನ್ ಸಿ

5. ಬೀಟಾ ಕೆರೋಟಿನ್

6. ಫೋಲಿಕ್ ಆಮ್ಲ

7. ಸೆಲೆನಿಯಮ್

8. ವಿಟಮಿನ್ ಡಿ 

                               

ಗರ್ಭಗೊರಳಿನ ಕ್ಯಾನ್ಸರ್

4.1 ಗರ್ಭಗೊರಳಿನ ಕ್ಯಾನ್ಸರ್‌ನ ಹೊರೆ

ವಾರ್ಷಿಕ ಸುಮಾರು 94857 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಭಾರತದಲ್ಲಿ 2,56,114 ಜನರು ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇದು ಸಾಮಾನ್ಯ ಕ್ಯಾನ್ಸರ್ ಆಗಿದೆ. ಪ್ರತಿ ವರ್ಷವೂ 4500 ಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ಪತ್ತೆ ಮತ್ತು 12,500 ಕ್ಕಿಂತ ಹೆಚ್ಚು ಜನರು ಕರ್ನಾಟಕದಲ್ಲಿ ಗರ್ಭಗೊರಳಿನ ಕ್ಯಾನ್ಸರ್‌ನೊಂದಿಗೆ ಜೀವಿಸುತ್ತಿದ್ದಾರೆ. 30-60 ವರ್ಷ ವಯಸ್ಸಿನ ಮಹಿಳೆಯರಲ್ಲಿ ಗರ್ಭಗೊರಳಿನ ಕ್ಯಾನ್ಸರ್ ಸಾಮಾನ್ಯವಾಗಿರುತ್ತದೆ. 

4.2 ಅಪಾಯ ಸಂಭವನೀಯತೆ ಹೆಚ್ಚಾಗಿರುವ ಮಹಿಳೆ ಯಾರು?

1. ಬಹುಜನರೊಂದಿಗೆ ಲೈಂಗಿಕ ಸಂಪರ್ಕ ಇರುವ ಮಹಿಳೆ

2. ಧೂಮಪಾನಿ ಮಹಿಳೆ

3. ಜನನಾಂಗದ ನೈರ್ಮಲ್ಯವನ್ನು ಕಾಪಾಡಿಕೊಳ್ಳದ ಮಹಿಳೆ 

4.3 ರೋಗಲಕ್ಷಣಗಳು

1. ಆರಂಭಿಕ ಹಂತದಲ್ಲಿ ಇದು ಲಕ್ಷಣಾತ್ಮಕವಾಗಿರುತ್ತದೆ.

2.  ವಿಪರೀತ ಬಿಳಿಸೆರಗು ಹೋಗುವುದು

3. ಸಂಭೋಗದ ನಂತರ ಮತ್ತು ಎರಡು ಋತುಚಕ್ರಗಳ ನಡುವೆ ಆಗುವ ರಕ್ತಸ್ರಾವ.

4. ಋತುಚಕ್ರ ನಿಂತುಹೋದ ನಂತರವೂ ಆಗುವ ರಕ್ತಸ್ರಾವ.

5. ಹೊಟ್ಟೆ ಮತ್ತು ಕೆಳಬೆನ್ನಿನಲ್ಲಿ ದೀರ್ಘಕಾಲದ ನೋವು.

4.4 ಆರಂಭಿಕ ತಪಾಸಣೆಯ (ಸ್ಕ್ರೀನಿಂಗ್) ವಿಧಾನಗಳು

1. ಪ್ಯಾಪ್‌ ಸ್ಮಿಯರ್‌ ಪರೀಕ್ಷೆ

2. ಎಚ್.ಪಿ.ವಿ. ಮತ್ತು ಡಿ.ಎನ್.ಎ ಪರೀಕ್ಷೆ

3. ವಿ.ಐ.ಎ ವಿಧಾನ (ಅಸಿಟಿಕ್ ಆಮ್ಲದೊಂದಿಗೆ ವಿಷುಯಲ್ ತಪಾಸಣೆ) 

1.1. ಪ್ಯಾಪ್ ಪರೀಕ್ಷೆ

ಇದೊಂದು ಸರಳವಾದ ನೋವುರಹಿತ ಪರೀಕ್ಷೆ.  ಸಣ್ಣ ಕುಂಚವನ್ನು ಬಳಸಿಕೊಂಡು ಗರ್ಭಗೊರಳಿನಿಂದ ವೈದ್ಯರು ಅಥವಾ ನರ್ಸ್ ಜೀವಕೋಶಗಳ ಮಾದರಿಯನ್ನು ತೆಗೆದುಕೊಳ್ಳುತ್ತಾರೆ.

ಇದನ್ನು ಯಾವಾಗ ಮಾಡಬೇಕು?

1. 36-60 ವರ್ಷ ವಯಸ್ಸಿನ ಎಲ್ಲಾ ಮಹಿಳೆಯರಿಗೆ ಇದನ್ನು ಮಾಡಬೇಕು.

2. ಸಂತಾನೋತ್ಪತ್ತಿಯ ಸಾಮರ್ಥ್ಯವಿರುವ ಮಹಿಳೆಯರಿಗೆ ಋತುಸ್ತ್ರಾವದ ಮೊದಲು ಅಥವಾ ನಂತರ ಇದನ್ನು ಮಾಡಬೇಕು.

 

 

 

ಇತ್ತೀಚಿನ ನವೀಕರಣ​ : 05-07-2021 12:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ - ಬೆಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080