|
|
|
4.ಯೋಜನೆಗಳ ಪಟ್ಟಿ
|
|
6.ಸಂಶೋಧನಾ ಪ್ರಕಟಣೆಗಳು
|

ಪರಿಚಯ
ವೈದ್ಯಕೀಯ ಗಂಥಿಶಾಸ್ತ್ರ ವಿಭಾಗ
ವೈದ್ಯಕೀಯ ಗಂಥಿಶಾಸ್ತ್ರ ವಿಭಾಗ ಎಲ್ಲ ರೀತಿಯ ರಕ್ತಶಾಸ್ತ್ರೀಯ ಕ್ಯಾನ್ಸರ್ (ಹೇಮಟಾಲಾಜಿಕಲ್ ಮ್ಯಾಲಿಗ್ನೆನ್ಸಿ) ಪ್ರಕರಣಗಳಲ್ಲಿ ರೋಗನಿರ್ಣಯ ಮಾಡುವುದು ಮತ್ತು ಚಿಕಿತ್ಸೆಯನ್ನು ನೀಡುವುದು; ಹಾಗೂ ಗಟ್ಟಿಯಾದ ಗೆಡ್ಡೆಗಳಿಗೆ, ವಿವಿಧ ನಿಗದಿಗಳಲ್ಲಿ, ಕೀಮೋಥೆರಪಿಯನ್ನು ನೀಡುವುದು; ಕ್ಯಾನ್ಸರ್‌ನಿಂದ ಬಳಲುತ್ತಿರುವ ವಯಸ್ಕ ರೋಗಿಗಳ ರೋಗನಿರ್ಣಯ ಮತ್ತು ಚಿಕಿತ್ಸೆಯ ವ್ಯವಸ್ಥೆಯನ್ನು ಸುಧಾರಿಸಲು ವೈದ್ಯಕೀಯ ಗಂಥಿಶಾಸ್ತ್ರ ವಿಭಾಗವು ಬದ್ದತೆಯನ್ನು ಹೊಂದಿದೆ. ಈ ಮಹೋದ್ದೇಶವನ್ನು ಪೂರೈಸಲು ವಿಶಾಲ ವ್ಯಾಪ್ತಿಯ ಸಂಶೋಧನೆ, ಕ್ಲಿನಿಕಲ್ ಸಂಶೋಧನೆ, ರೋಗಿಯ ಆರೈಕೆ ಮತ್ತು ಬೋಧನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವಿಭಾಗದಲ್ಲಿರುವ ತಜ್ಞರು ಉತ್ತಮ ವಿದ್ಯಾರ್ಹತೆಯನ್ನು ಮತ್ತು ಉತ್ತಮ ಅನುಭವವನ್ನು ಹೊಂದಿದ್ದಾರೆ. ಇವರು ಬಹಳ ತಾಳ್ಮೆಯಿಂದ ಕ್ಯಾನ್ಸರ್ ರೋಗಿಗಳ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದರಿಂದ ಬದುಕುಳಿಯುವ ರೋಗಿಗಳ ಸಂಖ್ಯೆ ಸುಧಾರಣೆಗೊಂಡಿದೆ ಮತ್ತು ಮರಣ ಪ್ರಮಾಣವು ಕಡಿಮೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುವ ಕಿಮೋಥೆರಪಿ ಮತ್ತು ಹಗಲುಹೊತ್ತಿನಲ್ಲಿ ನೀಡಲಾಗುವ ಕಿಮೋಥೆರಪಿಯನ್ನು ಪ್ರತಿನಿತ್ಯ ವಿಭಾಗದ ವತಿಯಿಂದ ನಿರ್ವಹಿಸಲಾಗುತ್ತಿದೆ. ದೀರ್ಘಕಾಲ ರೋಗಿಗಳಿಗೆ ಕಿಮೋ ಔಷಧಿಯನ್ನು ಸುಲಭವಾಗಿ ನೀಡಲು ಅತ್ಯುತ್ತಮ ಆಧುನಿಕ ಸಲಕರಣೆಗಳು ಇಲ್ಲಿ ಲಭ್ಯವಿದ್ದು, ಇವುಗಳ ಬಳಕೆಯಲ್ಲಿ ಶುಶ್ರೂಷಕರು ಮತ್ತು ಕಿರಿಯ ವೈದ್ಯರು ಪರಿಣಿತರಾಗಿದ್ದಾರೆ.
ವೈದ್ಯಕೀಯ ಗಂಥಿಶಾಸ್ತ್ರ ವಿಭಾಗವು ಎಂಟು ವೈದ್ಯರು ಮತ್ತು ಹದಿನೆಂಟು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು (ಡಿ.ಎಂ. ಮೆಡಿಕಲ್ ಆಂಕಾಲಜಿ) ಹೊಂದಿದೆ. ವಿಭಾಗದ ವತಿಯಿಂದ ಪ್ರತಿನಿತ್ಯವೂ ಹೊರರೋಗಿ (ಓಪಿಡಿ) ಸೇವೆಗಳನ್ನು ನೀಡಲಾಗುತ್ತಿದೆ ಮತ್ತು ನಿತ್ಯ 350ರಿಂದ 400 ರೋಗಿಗಳು ಓಪಿಡಿಗೆ ಭೇಟಿ ನೀಡುತ್ತಾರೆ. ಪ್ರತಿನಿತ್ಯ ಏಕಕಾಲಕ್ಕೆ, ಸುಮಾರು 75ರಿಂದ 100 ರೋಗಿಗಳಿಗೆ ಕಿಮೋಥೆರಪಿ ನೀಡುವುದು ಮತ್ತು ಇತರೆ ತೊಡಕುಗಳ ನಿರ್ವಹಣೆ ಕೆಲಸಗಳನ್ನು ಮಾಡಲಾಗುತ್ತಿದೆ. ಪ್ರತಿ ಹೊಸ ರೋಗಿಗೆ, ರೋಗನಿರ್ಣಯ ಮುಗಿದ ನಂತರ, ವಿಭಾಗದ ವೈದ್ಯರೆಲ್ಲ ಸೇರಿ ಚರ್ಚಿಸಿ ಚಿಕಿತ್ಸೆಯನ್ನು ಯೋಜಿಸಲಾಗುತ್ತದೆ. ವಿಭಾಗವು ತನ್ನದೇ ಆದ ವೈದ್ಯಕೀಯ ಕಿರು ಶಸ್ತ್ರಚಿಕಿತ್ಸಾಗಾರವನ್ನು (ಮೈನರ್ ಓ.ಟಿ) ಹೊಂದಿದೆ. ಅಲ್ಲಿ ಬೋನ್ ಮ್ಯಾರೊ ಆಪರೇಷನ್ಸ್, ಬಯೋಪ್ಸಿಸ್, ಅಸ್ಕಿಟಿಕ್ ಮತ್ತು ಪ್ಲೆರಲ್ ಟ್ಯಾಪಿಂಗ್, ಟ್ರುಕಟ್ ಬಯಾಪ್ಸಿ ಮುಂತಾದ ಎಲ್ಲಾ ಚಿಕ್ಕಚಿಕ್ಕ ಕ್ರಿಯಾವಿಧಾನಗಳು, ಸೋಂಕು ಉಂಟಾಗದಂತೆ ಹಲವು ಮುನ್ನೆಚ್ಚರಿಕೆಗಳ ಸಹಿತ ನಡೆಸಲ್ಪಡುತ್ತವೆ. ನಾನ್‌ಹಾಡ್ಗಿನ್‌ಸ್ಕಿನ್ ಲಿಂಫೋಮಾ, ಹಾಡ್ಗಿನ್‌ಸ್ಕಿನ್ ಲಿಂಫೋಮಾ ಮತ್ತು ಮಲ್ಟಿಪಲ್ ಮೈಲೋಮಾಗಳಂತಹ ಕ್ಯಾನ್ಸರ್‌ರೋಗಗಳಿಗೆ ಆಟೋಲೋಜಸ್ ಸ್ಟೆಮ್‌ಸೆಲ್ ಟ್ರಾನ್ಸ್‌ಪ್ಲಾಂಟೇಷನ್ ನಡೆಸಲು ಈ ವಿಭಾಗದಲ್ಲಿ ವಿಶೇಷ ಕ್ಲಿನಿಕ್ ಇದೆ.
ಶೈಕ್ಷಣಿಕ ಚಟುವಟಿಕೆಗಳು :
ಇಲಾಖೆಯ ಶೈಕ್ಷಣಿಕ ಚಟುವಟಿಕೆಗಳು ಹೀಗಿವೆ :
ಪ್ರತಿ ಮಂಗಳವಾರ ಸುದೀರ್ಘ ವಿಚಾರಗೋಷ್ಠಿಗಳು ಪ್ರತಿ ಬುಧವಾರ ಪ್ರಕರಣಗಳ (ಕೇಸ್) ಪ್ರಸ್ತುತಿಗಳು ಜರ್ನಲ್ ಕ್ಲಬ್ - ಪ್ರತಿ ಗುರುವಾರ ಪ್ರತಿ ಶುಕ್ರವಾರ - ಚಿಕ್ಕ ವಿಚಾರ ಸಂಕಿರಣಗಳು ಪ್ರತಿ ಗುರುವಾರ ಬೆಳಿಗ್ಗೆ ನಾನಾ ರೀತಿಯ ಕ್ಲಿನಿಕ್
ಲಭ್ಯವಿರುವ ಕೋರ್ಸುಗಳು :
ವೈದ್ಯಕೀಯ ಗಂಥಿಶಾಸ್ತ್ರದಲ್ಲಿ ಪ್ರತಿಷ್ಠಿತ ಡಿ.ಎಂ. ಪದವಿ ಕೋರ್ಸ್ ಅನ್ನು ವಿಭಾಗದಲ್ಲಿ ನಡೆಸಲಾಗುತ್ತಿದೆ. ನೀಟ್ (ಎನ್‌ಇಇಟಿ) ಪರೀಕ್ಷೆಯ ಮೂಲಕ ರಾಷ್ಟ್ರೀಯ ಮಟ್ಟದ ಪ್ರವೇಶಪರೀಕ್ಷೆ ನಡೆಸಿ, ಪ್ರತಿ ವರ್ಷವೂ ಆರು ಅಭ್ಯರ್ಥಿಗಳನ್ನು ಈ ಕೋರ್ಸ್‌ಗಾಗಿ ಆಯ್ಕೆಮಾಡಲಾಗುತ್ತಿದೆ. 2010ರ ಆಗಸ್ಟ್ ನಿಂದ ಈ ಪದವಿ ಸೀಟ್ ಗಳ ಸಂಖ್ಯೆಯನ್ನು 6ಕ್ಕೆ ಹೆಚ್ಚಿಸಲಾಗಿದೆ.
ಈ ಕೋರ್ಸು ಮೂರು ವರ್ಷಗಳ ಕಾಲಾವಧಿಯದ್ದಾಗಿದೆ. ಜುಲೈ ಮತ್ತು ಜೂನ್ ತಿಂಗಳುಗಳಲ್ಲಿ ಎರಡು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪರೀಕ್ಷೆಯು ಎರಡು ಭಾಗಗಳಲ್ಲಿ ನಡೆಯುತ್ತದೆ. ಮೊದಲ ಭಾಗವು, 90 ಅಂಕಗಳ ಲಿಖಿತಪರೀಕ್ಷೆಯನ್ನು ಹೊಂದಿದೆ. ಪ್ರಶ್ನೆಪತ್ರಿಕೆಯು 90 ಬಹುಆಯ್ಕೆ ಪ್ರಶ್ನೆಗಳನ್ನು ಹೊಂದಿರುತ್ತದೆ. ಈ ಲಿಖಿತಪರೀಕ್ಷೆಯನ್ನಾಧರಿಸಿ ಉತ್ತಮ ಮತ್ತು ಅರ್ಹ ಅಭ್ಯರ್ಥಿಗಳನ್ನು ಪಟ್ಟಿ ಮಾಡಲಾಗುತ್ತದೆ. ಅರ್ಹತಾದಾಯಕ ಅಂತಿಮ ಪಟ್ಟಿಯನ್ನ ಆಧರಿಸಿ 6 ಅಭ್ಯರ್ಥಿಗಳನ್ನು ಆಯ್ಕೆಗೊಳಿಸಲಾಗುತ್ತದೆ.
ಕೋರ್ಸ್ ಕಲಿಕೆಯ ಸಮಯದಲ್ಲಿ, ಎಲ್ಲಾ ರೀತಿಯ ಕ್ಯಾನ್ಸರ್‌ನ ಗಟ್ಟಿಯಾದ ಗೆಡ್ಡೆಗಳಿಗೆ ಮತ್ತು ರಕ್ತಸಂಬಂಧೀ ಕ್ಯಾನ್ಸರ್‌ನ ಎಲ್ಲಾ ರೀತಿಯ ಚಿಕಿತ್ಸೆಗಳಿಗೆ ವಿದ್ಯಾರ್ಥಿಗಳು ಪ್ರತ್ಯಕ್ಷ ಸಾಕ್ಷಿಯಾಗುತ್ತಾರೆ. ಅಷ್ಟೇ ಅಲ್ಲದೆ, ಮಕ್ಕಳ ಗಂಥಿಶಾಸ್ತ್ರ, ರಕ್ತಸಂಬಂಧೀ ಗಂಥಿಶಾಸ್ತ್ರ ಮತ್ತು ಇತರ ಕ್ಯಾನ್ಸರ್ ಸಂಬಂಧೀ ಕಾಯಿಲೆಗಳ ಚಿಕಿತ್ಸಾ ವಿಭಾಗಗಿಗೆ ಅವರನ್ನು ಕಲಿಕೆಗಾಗಿ ನಿಯೋಜಿಸಲಾಗುವುದು.
ಕರ್ನಾಟಕದ ವಿವಿಧ ವೈದ್ಯಕೀಯ ಕಾಲೇಜುಗಳ ಎಂ.ಡಿ.ಮೆಡಿಸಿನ್ ಪದವಿ ವಿದ್ಯಾರ್ಥಿಗಳು, ಬಾಹ್ಯ ನಿಯೋಜನೆ ಪಡೆದು, ಕಿದ್ವಾಯಿ ಸಂಸ್ಥೆಗೆ ಬಂದು, ಇಲ್ಲಿ ವಿವಿಧ ಗಂಥಿಶಾಸ್ತ್ರೀಯ ಚಿಕಿತ್ಸೆಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.
ಸೌಲಭ್ಯಗಳು
Out Patient Services
In Patient Services
Minor OT procedures like Bone Marrow Aspiration & Biopsy,Tru cut Biopsies,Intrathecal Chemotherapy, pleural tapping, ascetic tapping
Chemotherapy both for Haematological & Solid tumors both inpatient & Day Care ward.
High Dose Chemotherapy
Autologous BMT
Immunotherapy
ಅಂಕಿಅಂಶಗಳು
Statistics - 2019
OUT – PATIENTS DETAILS
Unit
|
Male
|
Female
|
Total
|
Unit – I
|
17204
|
21399
|
38603
|
Unit - II
|
12972
|
15589
|
28561
|
IN-PATIENTS DETAILS
Unit
|
Male
|
Female
|
Total
|
Unit – I
|
1536
|
1199
|
2735
|
Unit – II
|
1410
|
1181
|
2591
|
Discharges
|
Unit – I
|
1374
|
1110
|
2484
|
Unit –II
|
1279
|
1120
|
2399
|
Deaths
|
Unit – I
|
155
|
106
|
261
|
Unit – II
|
124
|
66
|
190
|
ಸಿಬ್ಬಂದಿಗಳ ವಿವರ
Dr. LOKANATH DASAPPA
Designation : Proffessor & HOD Medical Oncology
Qualification : MBBS, DM (Oncology) MD (Medicine)
Dr. LINU ABRAHAM
Designation : Proffessor of Medical Oncology & Head of Unit - II
Qualification : MBBS, MD ,DM (Mediacal Oncology)
Dr. K N LOKESH
Designation : Associate Proffessor
Qualification : MBBS, MD ,DM, PDCR
Dr. A H RUDRESH
Designation : Associate Proffessor
Qualification : MBBS, MD ,DM, Mediacal Oncology
Dr. L K RAJEEV
Designation : Associate Proffessor
Qualification : MBBS, MD ,DM,
Dr. SURESH BABU
Designation : Associate Proffessor
Qualification : MBBS, MD ,DM
Dr. SMITHA C SALDANHA
Designation : Associate Proffessor
Qualification : MBBS, MD ,DM, ECMO