ಅಭಿಪ್ರಾಯ / ಸಲಹೆಗಳು

ಸೋಂಕುಶಾಸ್ತ್ರ ಮತ್ತು ಜೈವಿಕ ಅಂಕಿಅಂಶಗಳ ಶಾಸ್ತ್ರ

 

1.ಪರಿಚಯ

2.ಸೌಲಭ್ಯಗಳು

3.ಅಂಕಿಅಂಶಗಳು

4.ಯೋಜನೆಗಳ ಪಟ್ಟಿ

5.ಸಿಬ್ಬಂದಿಗಳ ವಿವರ

6.ಸಂಶೋಧನಾ ಪ್ರಕಟಣೆಗಳು

 

        

               

ಪರಿಚಯ

ಸೋಂಕುಶಾಸ್ತ್ರ ಮತ್ತು ಜೈವಿಕ ಅಂಕಿಅಂಶಗಳ ಶಾಸ್ತ್ರ ವಿಭಾಗ

ಬೆಂಗಳೂರಿನ ಜನಸಂಖ್ಯಾ ಆಧಾರಿತ ಕ್ಯಾನ್ಸರ್ ನೋಂದಾವಣೆ (1982ರಲ್ಲಿ ಆರಂಭ) ಮತ್ತು ಆಸ್ಪತ್ರೆ ಆಧಾರಿತ ಕ್ಯಾನ್ಸರ್ ನೋಂದಣಿ (1984ರಲ್ಲಿ ಆರಂಭ) ಮತ್ತು ಭಾರತೀಯ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ (ಐಸಿಎಂಆರ್) ಕಾರ್ಯಜಾಲದಲ್ಲಿ ಒಂದಾಗಿ ಸೇರಿರುವ ಸೋಂಕುಶಾಸ್ತ್ರ ಮತ್ತು ಜೈವಿಕ ಅಂಕಿಅಂಶಗಳಶಾಸ್ತ್ರ ವಿಭಾಗವು ದೇಶದಲ್ಲಿಯೇ ಅತ್ಯಂತ ಹಳೆಯ ಕ್ಯಾನ್ಸರ್ ನೋಂದಣಿ ಕೇಂದ್ರವಾಗಿದೆ. ಅಲ್ಲದೆ, ಕ್ಯಾನ್ಸರ್‌ ನೋಂದಣಿ ಕೆಲಸದ ಜೊತೆಗೆ, ವಿಭಾಗವು ಬೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕಿದ್ವಾಯಿ ಸಂಸ್ಥೆಯು ನಡೆಸುತ್ತಿರುವ ವಿಜ್ಞಾನ ಮತ್ತು ತತ್ಸಂಬಂಧೀ ಶೈಕ್ಷಣಿಕ ಕೋರ್ಸುಗಳಾಗಿರುವ ನರ್ಸಿಂಗ್ ಮತ್ತು ಇತರೆ ಅರೆ ವೈದ್ಯಕೀಯ ವಿಷಯಗಳಲ್ಲಿನ ಡಿಪ್ಲೊಮ ಮತ್ತು ಪದವಿ ಕೋರ್ಸುಗಳು ಹಾಗೂ ವಿವಿಧ ಸೂಪರ್ ಸ್ಪೆಷಾಲಿಟಿ ಪದವಿಗಳು ಮತ್ತಿತರ ವೈದ್ಯಕೀಯ ಪದವಿಗಳು – ಇವುಗಳಲ್ಲಿ ಅಳವಡಿಸಲಾಗಿರುವ ಸೋಂಕುಶಾಸ್ತ್ರ ಮತ್ತು ಜೈವಿಕ ಅಂಕಿಅಂಶಗಳಶಾಸ್ತ್ರ ವಿಷಯಗಳನ್ನು ವಿಭಾಗದ ವತಿಯಿಂದ ಬೋಧಿಸಲಾಗುತ್ತಿದೆ. ಪ್ರೌಢಪ್ರಬಂಧಗಳು/ ಡಾಕ್ಟರೇಟ್‌ ಪ್ರಬಂಧಗಳನ್ನು ಸಿದ್ಧಪಡಿಸುವ ಸಂಶೋಧನಾ ನಿರತ ವಿದ್ಯಾರ್ಥಿಗಳಿಗೆ ಅಂಕಿ-ಅಂಶಗಳ ವಿಶ್ಲೇಷಣೆಯ ಸಮಾಲೋಚನಾ ಸೌಕರ್ಯವನ್ನು ವಿಭಾಗದ ವತಿಯಿಂದ ಒದಗಿಸಲಾಗುತ್ತಿದೆ. ವಿಭಾಗವು ವೈಜ್ಞಾನಿಕ ಸಂಸ್ಥೆಗಳ ಸಹಯೋಗದೊಂದಿಗೆ ಹಲವು ಪರಿಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಹಲವಾರು ಪರಿಯೋಜನೆಗಳಿಗೆ ಸಂಬಂಧಿಸಿದಂತೆ ಕಿದ್ವಾಯಿ ಸಂಸ್ಥೆಯ ಸಿಬ್ಬಂದಿಗಳು ನಡೆಸುವ ಅಧ್ಯಯನಗಳು, ಸಂಶೋಧನಾ ಪ್ರಬಂಧಗಳ ಪ್ರಕಟಣೆಗಳು ಇತ್ಯಾದಿಗಳ ಸಂದರ್ಭದಲ್ಲಿ ಅವರಿಗೆ ಈ ವಿಭಾಗದ ಬೋಧಕವರ್ಗವು ಅಂಕಿ-ಅಂಶಗಳ ಕುರಿತಾದ ಸೇವಾ ಬೆಂಬಲವನ್ನು ಒದಗಿಸುತ್ತಿದೆ. ಬೇರೆ ಬೇರೆ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಹಲವಾರು ಸಾಮಾಜಿಕ ಕಾರ್ಯಕರ್ತರಿಗೆ ಕ್ಯಾನ್ಸರ್ ನೋಂದಣಿಯ ಕಾರ್ಯಚಟುವಟಿಕೆಗಳ ಕುರಿತಾಗಿ ತರಬೇತಿಯನ್ನು ಈ ವಿಭಾಗದ ಸಿಬ್ಬಂದಿ ವರ್ಗದವರು ನೀಡುತ್ತಿದ್ದಾರೆ.

ವಿಭಾಗದ ಬೋಧಕ ವರ್ಗದಲ್ಲಿ ಒಬ್ಬ ಅಧ್ಯಾಪಕರು ಒಬ್ಬ ಪ್ರಾಧ್ಯಾಪಕರು, ಒಬ್ಬ ಸಹ ಪ್ರಾಧ್ಯಾಪಕರು ಮತ್ತು ಒಬ್ಬ ಸಹಾಯಕ ಪ್ರಾಧ್ಯಾಪಕರು ಇದ್ದಾರೆ. ವಿಭಾಗದ ಬೋಧಕೇತರ ವರ್ಗದಲ್ಲಿ ಕ್ಷೇತ್ರ ಮೇಲ್ವಿಚಾರಕ (ಫೀಲ್ಡ್‌ ಸೂಪರ್‌ವೈಸರ್), ಅಂಕಿಅಂಶಶಾಸ್ತ್ರಜ್ಞರು (ಸ್ಟಾಟಿಸ್ಟಿಷಿಯನ್ಸ್) ಮತ್ತು ಸಹಾಯಕ ಸಾಮಾಜಿಕ ವಿಜ್ಞಾನಿಗಳು ಇದ್ದಾರೆ. ಸಂಸ್ಥೆಯ ವಿವಿಧ ವಿಭಾಗಗಳು ಕೈಗೊಳ್ಳುವ ಮೂಲಭೂತ ವಿಜ್ಞಾನದ ಮತ್ತು ಕ್ಲಿನಿಕಲ್ ಪ್ರಯೋಗಗಳ ಪರಿಯೋಜನೆಗಳಿಗೆ ಈ ವಿಭಾಗದ ಬೋಧನಾ ವರ್ಗವು ಅಂಕಿಅಂಶಶಾಸ್ತ್ರೀಯ ಬೆಂಬಲವನ್ನು ಒದಗಿಸುತ್ತದೆ. ಸೋಂಕುಶಾಸ್ತ್ರ, ಅಂಕಿಅಂಶಶಾಸ್ತ್ರ ಮತ್ತು ಸಂಶೋಧನಾ ವಿಧಾನಗಳ ಕುರಿತು ಹಲವು ವೃತ್ತಿಪರ ಸಂಸ್ಥೆಗಳು ಆಯೋಜಿಸುವ ತರಬೇತಿ/ವಿಚಾರಸಂಕಿರಣ/ಕಾರ್ಯಾಗಾರ ಮತ್ತು ಇತರೆ ಕಾರ್ಯಕ್ರಮಗಳಿಗೆ ಈ ವಿಭಾಗದ ಬೋಧನಾ ವರ್ಗದವರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಹ್ವಾನಿಸಲಾಗುತ್ತಿದೆ. ಸಾರ್ವಜನಿಕರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಕೈಗಾರಿಕೆಗಳ ಕಾರ್ಮಿಕರು - ಇವರಿಗೆ ಕ್ಯಾನ್ಸರ್ ಕುರಿತ ಜನಜಾಗೃತಿಯನ್ನು ಮೂಡಿಸಲು ಸಂಘಟಿಸಲಾಗುವ `ಕ್ಯಾನ್ಸರ್ ಜನಜಾಗೃತಿ ಶಿಬಿರ’ಗಳಲ್ಲಿ ಈ ವಿಭಾಗದ ಸಿಬ್ಬಂದಿ ವರ್ಗವು ವ್ಯಾಪಕವಾಗಿ ತೊಡಗಿಸಿಕೊಂಡಿದೆ. 

                                   

ಸೌಲಭ್ಯಗಳು

Offering Biostatistics and Research  course for Msc, Bsc, Diploma 

                               

ಅಂಕಿಅಂಶಗಳು

Population Based Cancer Statistics (Please see Statistics Menu in Web Site)

Hospital Based Cancer Statistics (Please see Statistics Menu in Web Site) 

                           

ಯೋಜನೆಗಳ ಪಟ್ಟಿ

ನೋಂದಣಿ ಸಿಬ್ಬಂದಿಯು ಕೈಗೊಂಡಿರುವ/ಸಹಯೋಗ ಒದಗಿಸಿರುವ ವಿಭಾಗದ ಪರಿಯೋಜನೆಗಳು 

1. ಡಾ.ಸಿ.ರಮೇಶ್, ಪ್ರಧಾನ ಇನ್‌ವೆಸ್ಟಿಗೇಟರ್ ಮತ್ತು ಶ್ರೀ ವಿಜಯ್ ಸಿ.ಆರ್, ಸಹ-ಪ್ರಧಾನ ಇನ್‌ವೆಸ್ಟಿಗೇಟರ್; ಅಧ್ಯಯನ ವಿಷಯ - "ಮಿತ ಸಂಪನ್ಮೂಲಗಳಿರುವ ಪರಿಸ್ಥಿತಿಯಲ್ಲಿ ಬಾಯಿ ಕ್ಯಾನ್ಸರ್‌ಗಳ ತಪಾಸಣೆ, ರೋಗನಿರ್ಣಯ ಮತ್ತು ಚಿಕಿತ್ಸೆ’’; ಅಧ್ಯಯನ ಸಹಯೋಗ - ಯುಎಸ್ಎ ರಿಸರ್ಚ್ ಟ್ರಯಾಂಗಲ್ ಇನ್‌ಸ್ಟಿಟ್ಯೂಟ್.

2. ಡಾ.ಸಿ.ರಮೇಶ್ – ಕಿದ್ವಾಯಿ ಸಂಸ್ಥೆಯಿಂದ ಯೋಜನೆಯ ಪ್ರಧಾನ ಇನ್‌ವೆಸ್ಟಿಗೇಟರ್‌; ಅಧ್ಯಯನ ವಿಷಯ - "ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗಳ ಜನಸಂಖ್ಯಾಶಾಸ್ತ್ರೀಯ ರೂಪುರೇಷೆಗಳು" ; ಅಧ್ಯಯನ ಸಹಯೋಗ - ಥೋರಾಸಿಕ್ ಆಂಕಾಲಜಿ ಡಿಸೀಸ್ ಮ್ಯಾನೇಜ್ಮೆಂಟ್ ಗ್ರೂಪ್; ಅಧ್ಯಯನ ಸಂಚಾಲಕ -ಡಾ.ಸಿ.ಎಸ್.ಪ್ರಮೇಶ್, ಟಾಟಾ ಮೆಮೋರಿಯಲ್ ಸೆಂಟರ್, ಮುಂಬೈ.

3. ಡಾ.ಸಿ.ರಮೇಶ್ – ಪರಿಯೋಜನೆಯ ಸಹ-ಪ್ರಧಾನ ಇನ್‌ವೆಸ್ಟಿಗೇಟರ್; ಅಧ್ಯಯನ ವಿಷಯ - "ರೋಗಶಾಸ್ತ್ರೀಯ ಟ್ಯೂಮರ್ ಮಾರ್‌ಜಿನ್‌ಗಳು ಮತ್ತು ನೋಡಲ್ ಕಾಯಿಲೆ ಇವುಗಳಿಗೆ ಶಿರ ಮತ್ತು ಕುತ್ತಿಗೆ ಕ್ಯಾನ್ಸರ್‌ನಲ್ಲಿಯ ಕ್ಲಿನಿಕಲ್ ಟಾರ್‌ಗೆಟ್‌ ವಾಲ್ಯೂಮ್‌ ಕುರಿತಾಗಿ ಇರುವ ಪರಸ್ಪರ ಸಂಬಂಧಗಳು ಮತ್ತು ಮೈಕ್ರೋಸ್ಕೋಪಿಕ್ ಕಾಯಿಲೆಗಾಗಿರುವ ಮುನ್ನರಿವಿನ ಅಂಶಗಳ ವಿಶ್ಲೇಷಣೆ (ಐಸಿಎಂಆರ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಮತ್ತು ಅನುಮೋದನೆಯನ್ನು ನಿರೀಕ್ಷಿಸಲಾಗಿದೆ).

4. ಡಾ.ಸಿ.ರಮೇಶ್ – ಪರಿಯೋಜನೆಯ ಪ್ರಧಾನ ಇನ್‌ವೆಸ್ಟಿಗೇಟರ್; ಅಧ್ಯಯನ ವಿಷಯ - "ಜೀವಮಾನವಿಡೀ ಸಸ್ಯಾಹಾರ ಸೇವನೆ ಮತ್ತು ಭಾರತದಲ್ಲಿ ದೊಡ್ಡಕರುಳಿನ ಮತ್ತು ಗುದನಾಳ ಕ್ಯಾನ್ಸರ್‌ನ (ಕೊಲೊರೆಕ್ಟಲ್ ಕ್ಯಾನ್ಸರ್‌) ಅಪಾಯ ಸಂಭವನೀಯತೆ. ಪ್ರಕರಣ ನಿಯಂತ್ರಣ (ಕೇಸ್ ಕಂಟ್ರೋಲ್) ಅಧ್ಯಯನ’’ : ಸಹಯೋಗ - ಇಂಡೊಕ್ಸ್ ಕೇಸ್ ಕಂಟ್ರೋಲ್ ಒಕ್ಕೂಟ (ಜಾರಿಯಲ್ಲಿರುವ ಪರಿಯೋಜನೆ).

5. ಡಾ.ಬಿ.ಆರ್.ಗೋಪಾಲ ಕೃಷ್ಣಪ್ಪ : ಅಧ್ಯಯನ ವಿಷಯ - ''ಹೊಟ್ಟೆ ಕ್ಯಾನ್ಸರ್ ಸಂಭವಿಸುವ ಕುರಿತಾದ ಅಪಾಯಸಂಭವನೀಯ ಅಂಶಗಳನ್ನು ಗುರುತಿಸುವುದು’’ ಪಿ.ಎಚ್‌ಡಿ. ಪದವಿಗಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ನೋಂದಾಯಿಸಲಾಗಿದೆ.

6. ವಿಜಯ್ ಸಿ.ಆರ್ : ಅಧ್ಯಯನ ವಿಷಯ - 'ದಕ್ಷಿಣ ಭಾರತದಲ್ಲಿ ಬಾಯಿಯ ಕ್ಯಾನ್ಸರ್‌ ಕುರಿತ ಸೋಂಕುಶಾಸ್ತ್ರೀಯ ಅಧ್ಯಯನ, ಬೆಂಗಳೂರು’’ ಪಿ.ಎಚ್‌ಡಿ. ಪದವಿಗಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನೋಂದಾಯಿಸಲಾಗಿದೆ.

7. ಡಾ.ಜಯರಾಮ್ ಡಿ.ಜೆ : ದಕ್ಷಿಣ ಭಾರತದಲ್ಲಿ ಸೂಕ್ಷ್ಮದರ್ಶಕೀಯವಾಗಿ ದೃಢಪಟ್ಟ ಕ್ಯಾನ್ಸರ್‌ :- ಒಂದು ಸೋಂಕುಶಾಸ್ತ್ರೀಯ ಪ್ರಕರಣ-ನಿಯಂತ್ರಣ ಅಧ್ಯಯನ.

ಜಾರಿಯಲ್ಲಿರುವ ಸಂಶೋಧನಾ ಪರಿಯೋಜನೆಗಳು

1. ಜನಸಂಖ್ಯಾ ಆಧಾರಿತ ಕ್ಯಾನ್ಸರ್ ನೋಂದಣಿ.

2.  ಆಸ್ಪತ್ರೆ ಆಧಾರಿತ ಕ್ಯಾನ್ಸರ್ ನೋಂದಣಿ.

3. ಸ್ತನ, ಗರ್ಭಕಂಠ ಹಾಗೂ ಶಿರ ಮತ್ತು ಕುತ್ತಿಗೆ ಇವುಗಳ ಆರೈಕೆ & ಬದುಕುಳಿದ ಪ್ರಕರಣಗಳ ಆಸ್ಪತ್ರೆಯ ಆಧಾರಿತ ಕ್ಯಾನ್ಸರ್ ಮಾದರಿಗಳ ಅಧ್ಯಯನ.

ಸಂವಹನದ ಅಡಿಯಲ್ಲಿರುವ ಸಂಶೋಧನಾ ಪರಿಯೋಜನೆಗಳು

1. ಸ್ತನ, ಗರ್ಭಕಂಠ ಹಾಗೂ ಶಿರ ಮತ್ತು ಕುತ್ತಿಗೆ ಇವುಗಳ ಆರೈಕೆ ಮತ್ತು ಬದುಕುಳಿದ ಪ್ರಕರಣಗಳ ಜನಸಂಖ್ಯಾ ಆಧಾರಿತ ಕ್ಯಾನ್ಸರ್ ಮಾದರಿಗಳ ಅಧ್ಯಯನ.

2. ಗರ್ಭಕಂಠದ ಕ್ಯಾನ್ಸರ್‌ ಹೊರತುಪಡಿಸಿ ಸ್ತ್ರೀಯರಲ್ಲಿನ ಇತರೆ ಕ್ಯಾನ್ಸರ್‌ಗಳ ಆರೈಕೆ ಮತ್ತು ಬದುಕುಳಿದ ಪ್ರಕರಣಗಳ ಆಸ್ಪತ್ರೆಯ ಆಧಾರಿತ ಕ್ಯಾನ್ಸರ್ ಮಾದರಿಗಳ ಅಧ್ಯಯನ.

3. ಬಾಲ್ಯಾವಸ್ಥೆಯಲ್ಲಿನ ಕ್ಯಾನ್ಸರ್‌ಗಳ ಆರೈಕೆ ಮತ್ತು ಬದುಕುಳಿದ ಪ್ರಕರಣಗಳ ಆಸ್ಪತ್ರೆಯ ಆಧಾರಿತ ಕ್ಯಾನ್ಸರ್ ಮಾದರಿಗಳ ಅಧ್ಯಯನ. 

                           

ಸಿಬ್ಬಂದಿಗಳ ವಿವರ 

Dr. C RAMESH

Designation : Emeritus
 
Qualification : MSc, Ph.D
 
  
Dr. VIJAY C R
 
Designation : Associate Professor  
 
Qualification : M.Sc and Ph.D     

 

DAYANANDA C.S

Designation : Asst. Social Scientist  

Qualification : MA  

 

KUMUDHINI B J

Designation : Asst. Social Scientist 

Qualification :MSW  

 

MANJUNATH P

Designation : Asst. Social Scientist 

Qualification : MA  

 

VENKATESH K

Designation : Statastical Assistant

Qualification : MSc                                                     

 

Dr. GOPALAKRISHNAPPA B R

Designation : Field Supervisor

Qualification : MSc, LLB, Ph.D 

ಕ್ರ.ಸಂ.

ಹೆಸರು

ಹುದ್ದೆ

ಬೋಧಕ ವರ್ಗ

1

ಡಾ.ಸಿ.ರಮೇಶ್

ಪ್ರಾಧ್ಯಾಪಕರು ಮತ್ತು ವಿಬಾಗದ ಮುಖ್ಯಸ್ಥರು

2

ಶ್ರೀ ಸಿ.ಆರ್.ವಿಜಯ್

ಸಹಾಯಕ ಪ್ರಾಧ್ಯಾಪಕರು

ಆಸ್ಪತ್ರೆ ಆಧಾರಿತ ಕ್ಯಾನ್ಸರ್ ನೋಂದಣಿ ಸಿಬ್ಬಂದಿ

3

ಶ್ರೀ ಡಿ.ಜೆ.ಜಯರಾಮ್

ಸೀನಿಯರ್ ಇನ್‌ವೆಸ್ಟಿಗೇಟರ್

4

ಶ್ರೀ ಟಿ.ವೆಂಕಟೇಶ್

ಸಂಶೋಧನಾ ಅಧಿಕಾರಿ

5

ಶ್ರೀ ಬಿ.ಜೆ.ಕುಮುದಿನಿ

ಸಹಾಯಕ ಸಾಮಾಜಿಕ ವಿಜ್ಞಾನಿ

6

ಶ್ರೀ ಕೆ.ವೆಂಕಟೇಶ್

ಅಂಕಿಅಂಶಶಾಸ್ತ್ರದ ಸಹಾಯಕ.

7

ಶ್ರೀ ಸಿ.ಎಸ್.ದಯಾನಂದ

ಸಹಾಯಕ ಸಾಮಾಜಿಕ ವಿಜ್ಞಾನಿ

8

ಶ್ರೀ. ಪಿ.ಮಂಜುನಾಥ

ಸಹಾಯಕ ಸಾಮಾಜಿಕ ವಿಜ್ಞಾನಿ

9

ಶ್ರೀ ಸಿ.ಕುಮಾರ್

ಡೇಟಾ ಎಂಟ್ರಿ ಆಪರೇಟರ್

ಜನಸಂಖ್ಯಾ ಆಧಾರಿತ ಕ್ಯಾನ್ಸರ್ ನೋಂದಣಿ ಸಿಬ್ಬಂದಿ

1

ಶ್ರೀ ಬಿ.ಆರ್.ಗೋಪಾಲಕೃಷ್ಣಪ್ಪ

ಫೀಲ್ಡ್ ಸೂಪರ್‌ವೈಸರ್

2

ಶ್ರೀ ಬಿ.ಎಂ.ಗಂಗಯ್ಯ

ಡೇಟಾ ಎಂಟ್ರಿ ಆಪರೇಟರ್

         

                     

ಸಂಶೋಧನಾ ಪ್ರಕಟಣೆಗಳು 

Vijay C R, Dr. Lokesh V, Dr Ramesh et al. Epidemiology of Oral cancer-A Hospital based Case Control Study in Bengaluru. Journal of Medical Science and Clinical Research: December 2017: 5 (08): 26216-26221.

Vijay C R, Dr Ramesh C, Dr P Sridhar, Dr Gopalakrishnappa, Dr V Lokesh. “Gall bladder Cancer Incidence Trend over the time period in Bengaluru” Population Based Cancer Registry (1982-2012). Journal of Medical Science and Clinical Research: August 2017: 5 (08): 26210-26215.

Poojar Sridhar, Vijay Calmuge Raghu et al. CANCER CARE IN COVID-19 CRISIS: PANDEMIC OF THE 21ST CENTURY. International Journal of Scientific Research, May 2020: 9( 5).

Dr B G Sumathi, Vijay C R, Kumaraswamy, Mohd. Shaffiulla. A comprehensive Overview of Staphylococcus aureus Isolates from Cancer Patients. JMSCR Volume 05 Issue 12 December 2017. 32185-32193.

Dr K.B Linge Gowda , Dr. Vijay C.R , Dr V. Lokesh , Dr Mahantesh A.S , Dr Sridhar. P , Dr Nisarga V.M , Dr Divyashree S.J. A Hospital Based Case Control Study on Oral Cancer: K.M.I.O (Regional Cancer Center) Experience JMSCR. 08, 01, Page 1022-1031, January.2020.

Joseph B, Farooq N, Shafeeque MN, Sathiyan S, Lokesh V, Ramesh CVijay C R. Hypofractionation in postmastectomy breast irradiation. How safe are we in using standard tangentials?. Asian J Oncol 2017;3:101-5.

Cherungonath A, Appaji L, Padma M, Arunakumari BS, Arunkumar AR, Avinash T, Vijay C R. et al. Profile of acute lymphoblastic leukemia in children under 2 years of age. Indian J Med Paediatr Oncol 2018;39:307-11.

Joseph B, Farooq N, Kumar S, Vijay CR, Puthur KJ, Ramesh C, et al. Breast-conserving radiotherapy with simultaneous integrated boost; field-in-field three-dimensional conformal radiotherapy versus inverse intensity-modulated radiotherapy – A dosimetric comparison: Do we need intensity-modulated radiotherapy? South Asian J Cancer 2018;7:163-6.

Joseph B, Kumar RV, Champaka G, Shenoy A, Sabitha K S, Lokesh V, Ramesh C, Vijay C R. Biological tailoring of adjuvant radiotherapy in head and neck and oral malignancies – The potential role of p53 and eIF4E as predictive parameters.Indian J Cancer 2019;56:330-334.

Dr. Vijay Calmuge Raghu , Dr. Poojar Sridhar, Dr. Ramesh Cheluvarayaswamy et all.“ NOVEL COVID-19 BURDEN IN KARNATAKAAND INDIA: AN ATTEMPT TO FORECAST FUTURE TREND”. INTERNATIONAL JOURNAL OF SCIENTIFIC RESEARCH. Volume - 9 | Issue - 6 | June - 2020 | PRINT ISSN No. 2277 – 8179.

 

 

 

ಇತ್ತೀಚಿನ ನವೀಕರಣ​ : 02-07-2021 02:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ - ಬೆಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080