ಅಭಿಪ್ರಾಯ / ಸಲಹೆಗಳು

ವೈದ್ಯಕೀಯ ದಾಖಲೆಗಳು

  

 

ವೈದ್ಯಕೀಯ ದಾಖಲೆಗಳ ವಿಭಾಗ

ವೈದ್ಯರ ಮತ್ತು ರೋಗಿಗಳ ಅಗತ್ಯತೆಗಳನ್ನು ಪೂರೈಸುವ ವೈದ್ಯಕೀಯ ದಾಖಲೆಗಳ ವಿಭಾಗವು ಸಂಸ್ಥೆಯ ಒಂದು ಪ್ರಮುಖ ಅಂಗವಾಗಿದೆ. ರೋಗಿಗಳಿಗೆ ನೀಡಲಾದ ಚಿಕಿತ್ಸೆಯ ದಾಖಲೆಗಳು ಮತ್ತು ರೋಗಿಗಳು ಚಿಕಿತ್ಸೆಯನ್ನು ಮುಂದುವರೆಸಲು ಮತ್ತು ತಪಾಸಣೆಗಳನ್ನು ಮತ್ತೆಮತ್ತೆ ಮಾಡಬೇಕಾದುದನ್ನು ತಪ್ಪಿಸುವುದಕ್ಕೆ ಕಾಲಾನುಕ್ರಮದಲ್ಲಿ ಮಾಡಿದ ತಪಾಸಣೆಗಳ ವಿವರಗಳನ್ನು ವಿಭಾಗವು ಹೊಂದಿವೆ. ವೈದ್ಯರಿಗೆ ತಾವು ನೀಡಿರುವ ಚಿಕಿತ್ಸೆಯ ಮತ್ತು ಸಂಶೋಧನಾ ಕಾರ್ಯದ ಮೌಲ್ಯಮಾಪನ ಮಾಡಲು ಈ ವೈದ್ಯಕೀಯ ದಾಖಲೆಗಳು ಅನುಕೂಲ ಕಲ್ಪಿಸಿವೆ. ವೈದ್ಯಕೀಯ ದಾಖಲೆಗಳ ವಿಭಾಗವು, 1974ರಿಂದ ವಿವಿಧ ರಿಜಿಸ್ಟರ್‌ಗಳನ್ನು ಮತ್ತು 1991ರಿಂದ ಕೇಸ್‌ಶೀಟ್‌ಗಳನ್ನು ನಿರ್ವಹಿಸುತ್ತಾ ಬಂದಿದೆ.

ವೈದ್ಯಕೀಯ ದಾಖಲೆಗಳ ವಿಭಾಗದಲ್ಲಿ 2,62.221 ಕೇಸ್‌ಶೀಟ್‌ಗಳು ಇವೆ. ಇದಕ್ಕೆ ಪ್ರತಿವರ್ಷವೂ 17,238 ಹೊಸ ಕೇಸ್‌ಶೀಟ್‌ಗಳು ಸೇರ್ಪಡೆಗೊಳ್ಳುತ್ತಿವೆ. ವೈದ್ಯಕೀಯ ದಾಖಲೆಗಳ ವಿಭಾಗ ಗಣಕೀಕೃತವಾಗಿದೆ. ವಾರ್ಷಿಕವಾಗಿ ದಾಖಲಾಗುವ ಹೊಸ ಪ್ರಕರಣಗಳು ಕಾಲಕ್ರಮೇಣ ಏರಿಕೆ ಕಂಡಿವೆ. 1980ರಲ್ಲಿ 4,201 ಪ್ರಕರಣಗಳು ದಾಖಲಾಗಿದ್ದರೆ, 2010ರಲ್ಲಿ 17,238 ದಾಖಲಾಗಿವೆ. ವಿಭಾಗವು ಆಸ್ಪತ್ರೆ ಆಧಾರಿತ ಕ್ಯಾನ್ಸರ್ ನೋಂದಣಿ (ರಿಜಿಸ್ಟ್ರಿ) ಮತ್ತು ಸಂಸ್ಥೆಯ ನಿರ್ದೇಶಕರ ಕಚೇರಿಗೆ ಮಾಸಿಕ ಮತ್ತು ವಾರ್ಷಿಕ ಅಂಕಿಅಂಶಗಳನ್ನು ಒದಗಿಸುತ್ತದೆ. ಅಧ್ಯಯನಗಳು ಮತ್ತು ಸಂಶೋಧನಾ ಕಾರ್ಯಗಳಿಗಾಗಿ ವೈದ್ಯರು ಮತ್ತು ಇತರ ಸಂಶೋಧನಾ ನಿರತರಿಗೆ ವಿಭಾಗವು ಕೇಸ್ ಶೀಟ್‌ಗಳನ್ನು ಕೂಡಾ ಒದಗಿಸುತ್ತಾ ಬಂದಿದೆ. 

 

                   

ಸಿಬ್ಬಂದಿಗಳ ವಿವರ         

1.  ವೈದ್ಯಕೀಯ ದಾಖಲೆಗಳ ಅಧಿಕಾರಿ 1

2.  ವೈದ್ಯಕೀಯ ದಾಖಲೆಗಳ ಮೇಲ್ವಿಚಾರಕ 1

3.  ಸಹಾಯಕ ವೈದ್ಯಕೀಯ ದಾಖಲೆಗಳ ಅಧಿಕಾರಿ 1

4.  ಸಹಾಯಕ ಸಮಾಜ ವಿಜ್ಞಾನಿ 1

5.  ವೈದ್ಯಕೀಯ ದಾಖಲೆಗಳ ತಂತ್ರಜ್ಞರು 3

6.  ದ್ವಿತೀಯ ದರ್ಜೆ ಸಹಾಯಕರು 5

7.  ಗ್ರೂಪ್-`ಡಿ’ ನೌಕರರು 14

2010ರ ಜನವರಿಯಿದ 2010ರ ಡಿಸೆಂಬರ್ ವರೆಗೆ 17238 ಹೊಸ ಕೇಸ್ ಶೀಟ್‌ ಗಳನ್ನು ಸಿದ್ಧಪಡಿಸಲಾಯಿತು. ಮರುಭೇಟಿ ನೀಡುವ ರೋಗಿಗಳಿಗೆ 2,41,314 ಕೇಸ್ ಶೀಟ್‌ಗಳನ್ನು ನೀಡಲಾಯಿತು. ಸುಮಾರು 17497 ರೋಗಿಗಳು ಈ ಅವಧಿಯ ಒಳರೋಗಿಗಳಾಗಿ ದಾಖಲಾದರು. ಅವರಲ್ಲಿ 566 ರೋಗಿಗಳು ಮರಣ ಹೊಂದಿದರು. 

 

 

 

ಇತ್ತೀಚಿನ ನವೀಕರಣ​ : 25-07-2023 04:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ - ಬೆಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080