ಅಭಿಪ್ರಾಯ / ಸಲಹೆಗಳು

ಸಾರ್ವಜನಿಕ ಸಂಪರ್ಕ

 

1.ಪರಿಚಯ

2.ಸೌಲಭ್ಯಗಳು

3.ಅಂಕಿಅಂಶಗಳು

4.ಯೋಜನೆಗಳ ಪಟ್ಟಿ

5.ಸಿಬ್ಬಂದಿಗಳ ವಿವರ

6.ಸಂಶೋಧನಾ ಪ್ರಕಟಣೆಗಳು

                         

ಪರಿಚಯ

ಸಾರ್ವಜನಿಕ ಸಂಪರ್ಕಗಳ ವಿಭಾಗ

ಸಾರ್ವಜನಿಕ ಸಂಬಂಧಗಳು/ಸಂಪರ್ಕಗಳು ಎಂದರೆ ವಿವಿಧ ಸಾರ್ವಜನಿಕ ಸಂಸ್ಥೆಗಳ ನಡುವಿನ ಪರಸ್ಪರ ತಿಳಿವಳಿಕೆಯನ್ನು ಉತ್ತೇಜಿಸುವ ಕಲೆಯಾಗಿದೆ. ಇದು ಆಸ್ಪತ್ರೆಗಳಲ್ಲಿಯೂ ಸಹ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ.

ಇಲ್ಲಿ `ಸಾರ್ವಜನಿಕ’ ಎಂದರೆ ಉದ್ದೇಶಿತ ಜನರ ಗುಂಪು ಎಂದರ್ಥ. ಸಾರ್ವಜನಿಕ ಭಾವನೆಯು ಎಲ್ಲವನ್ನೂ ಹೊಂದಿದೆ. ಧನಾತ್ಮಕ ಸಾರ್ವಜನಿಕ ಭಾವನೆ ಇದ್ದಾಗ ಯಾವುದೂ ಸಹ ವಿಫಲಗೊಳ್ಳುವುದಿಲ್ಲ. ಸಾರ್ವಜನಿಕ ಎಂಬ ಪದವನ್ನು ಹೀಗೆ ವ್ಯಾಖ್ಯಾನಿಸಬಹುದು : ``ಒಂದೇ ರೀತಿಯ ಆಸಕ್ತಿ ಹೊಂದಿರುವ ಮತ್ತು ವಿವಾದಾಸ್ಪದ ವಿಷಯಗಳ ಬಗ್ಗೆ ಸಾಮಾನ್ಯ ಅಭಿಪ್ರಾಯ ಹೊಂದಿರುವ ಜನರ ಸಮೂಹ’’. ಆಸ್ಪತ್ರೆಯ ಹೊರರೋಗಿ ಮತ್ತು ಒಳರೋಗಿಗಳಲ್ಲಿ ಸಂಬಂಧ ಹೊಂದಿರುವ ವಿವಿಧ ರೀತಿಯ ಜನರಿದ್ದಾರೆ.

1. ಒಳರೋಗಿಗಳಿಗಾಗಿ ಆಂತರಿಕ ಸಾರ್ವಜನಿಕ ಸಂಪರ್ಕ, ವೈದ್ಯರು, ಶುಶ್ರೂಷಾ ಅಧೀಕ್ಷಕರು, ಮನೆಗೆಲಸದ ವಿಭಾಗ, ತಾಂತ್ರಿಕ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ಮತ್ತು ಸಂಶೋಧನಾ ವಿಭಾಗ, ಆಸ್ಪತ್ರೆಯ ನೌಕರರು, ಸಾಮಾಜಿಕ ಕಾರ್ಯಕರ್ತರು ಮತ್ತು ಆಡಳಿತ, ಖರೀದಿ ಮತ್ತು ಪೂರೈಕೆ ವಿಭಾಗ, ವಿಶೇಷ ವಾರ್ಡ್‌ಗಳು ಮತ್ತು ಆಸ್ಪತ್ರೆಯ ಗಣಕೀಕರಣ.

2.ಬಾಹ್ಯ ಪರಿಸರ, ಉತ್ತಮ ವಾರ್ಡ್‌ಗಳು ಮತ್ತು ಕಾರಿಡಾರ್‌ಗಳು, ಉತ್ತಮ ನೈರ್ಮಲ್ಯ ಸೌಲಭ್ಯ, ಬೆಳಕು ಮತ್ತು ವಾತಾಯನ, ಕಚೇರಿ ಮತ್ತು ನಿರ್ವಹಣೆ, ತೋಟಗಾರಿಕೆ, ಗ್ರಂಥಾಲಯ, ಪ್ರದರ್ಶಕಗಳ ಪ್ರದರ್ಶನ, ತಾಂತ್ರಿಕ ಯಂತ್ರಗಳು ಮತ್ತು ಶಸ್ತ್ರಚಿಕಿತ್ಸಾಗಾರಗಳು, ಔಷಧಾಲಯ, ಕ್ರಿಮಿನಾಶಕ ಕಾರ್ಯಾಚರಣೆ ಉಪಕರಣ.

ಸಾರ್ವಜನಿಕ ಸಂಪರ್ಕಾಧಿಕಾರಿಯವರ ಉದ್ದೇಶಗಳು ಮತ್ತು ಕಾರ್ಯಗಳು :
1.   ಆಸ್ಪತ್ರೆಯ ಆಂತರಿಕ ಮತ್ತು ಬಾಹ್ಯ ಸಂಬಂಧಗಳನ್ನು ಸುಧಾರಿಸುವ ಜವಾಬ್ದಾರಿ.
2.   ಆಸ್ಪತ್ರೆ ಮತ್ತು ಸಾರ್ವಜನಿಕರ ನಡುವೆ ಉತ್ತಮ ತಿಳಿವಳಿಕೆ ಮೂಡುವಲ್ಲಿ ಪರಿಶ್ರಮ.
3.   ಸಾರ್ವಜನಿಕರಿಂದ ಸಾಮಾನ್ಯ ದೂರುಗಳನ್ನು ಪಡೆಯುವುದು.
4. ಸಂಸ್ಥೆಗಾಗಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವುದು ಮತ್ತು ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯ ಆಡಳಿತಾಧಿಕಾರಿ ಇವರೊಂದಿಗೆ ಸಮಾಲೋಚಿಸಿ ದೂರುಗಳ ಪರಿಹಾರಕ್ಕಾಗಿ ಪರಿಶ್ರಮಿಸುವುದು.
5. ಆಸ್ಪತ್ರೆಯ ಕುರಿತಾಗಿ ಇರುವ ಸಾರ್ವಜನಿಕರ ಅಭಿಪ್ರಾಯ, ಚಿತ್ರಣಗಳ ಹೊಣೆಗಾರಿಕೆ. ಪ್ರಚಾರ, ಜಾಹಿರಾತು ಪ್ರದರ್ಶನ, ಕಿರುಚಿತ್ರಪ್ರದರ್ಶನ ಇತ್ಯಾದಿಗಳನ್ನು ಆಯೋಜಿಸುವ ಹೊಣೆಗಾರಿಕೆ.
6.   ಅನುಕೂಲಕರವಾದ ಪ್ರಚಾರವನ್ನು ಉತ್ತೇಜಿಸುವುದು ಅಥವಾ ಅಗತ್ಯವಿರುವಲ್ಲೆಲ್ಲಾ ತಪ್ಪುಮಾಹಿತಿಯನ್ನು ಸರಿಪಡಿಸುವುದು.
7.   ಸಂಸ್ಥೆಯ ಸಮುದಾಯ ಸೇವಾ ಕಾರ್ಯಕ್ರಮಕ್ಕೆ ಸಹಾಯ ಮಾಡುವುದು.
8.   ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯ ಆಡಳಿತಾಧಿಕಾರಿ ಇವರೊಂದಿಗೆ ಸಮಾಲೋಚಿಸಿ ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸುವುದು.
9.   ಸಂಸ್ಥೆಯ ಸಾಧನೆಗಳು ಮತ್ತು ಧ್ಯೇಯೋದ್ದೇಶಗಳನ್ನು ಪ್ರಚುರಪಡಿಸುವುದು ಮತ್ತು ಉತ್ತೇಜಿಸುವುದು.
10. ಪತ್ರಿಕಾ ಪ್ರಕಟಣೆಗಳು ಮತ್ತು ವರದಿಗಳನ್ನು ತಯಾರಿಸುವುದು ಮತ್ತು ಪತ್ರಿಕಾಗೋಷ್ಠಿಗಳನ್ನು ವ್ಯವಸ್ಥೆಗೊಳಿಸುವುದು.
11. ಹಣಕಾಸು ಇಲಾಖೆ, ಆದಾಯ ತೆರಿಗೆ ಇಲಾಖೆ ಮತ್ತಿತರ ಸರ್ಕಾರಿ ಏಜೆನ್ಸಿಗಳೊಂದಿಗೆ ಸಂಪರ್ಕವಿಟ್ಟುಕೊಂಡು, ಪರವಾನಗಿಗಳು ಮತ್ತಿತರ ಅರ್ಜಿಗಳನ್ನು ಅನುಸರಣಾ ಕಾರ್ಯವನ್ನು ಕೈಗೊಳ್ಳವುದು.
12. ಸಂಸ್ಥೆಯ ಕೆಲಸಕಾರ್ಯಗಳಿಗಾಗಿ ಹೊರಗಿನ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದ್ದು ಕೆಲಸಗಳನ್ನು ಮಾಡಿಸಿಕೊಳ್ಳುವುದು. 
ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳು :
1.   ವಾಹನಗಳ ನಿರ್ವಹಣೆ, ಲಾಗ್ ಪುಸ್ತಕಗಳ ನಿರ್ವಹಣೆ ಮತ್ತು ಕಾಲಕಾಲಕ್ಕೆ ಅವುಗಳ ಪರಿಶೀಲನೆ. ವಾಹನ ವಿಮೆ ಮತ್ತು ರಸ್ತೆ ತೆರಿಗೆ ಪಾವತಿಸಲು ವ್ಯವಸ್ಥೆ ಮಾಡುವುದು.
2.   ಅತಿಥಿ ಗೃಹದ ನಿರ್ವಹಣೆ, ವೈಜ್ಞಾನಿಕ ವೈದ್ಯರಿಗೆ ಕೊಠಡಿಗಳ ಹಂಚಿಕೆ.
3.   ಭದ್ರತಾ ಸಿಬ್ಬಂದಿಯ ಕೆಲಸದ ಮೇಲ್ವಿಚಾರಣೆ ಮಾಡುವುದು ಮತ್ತು ಬಿಲ್‌ಗಳ ಪಾವತಿ ವ್ಯವಸ್ಥೆ ಮಾಡುವುದು.
4.   ಅತಿಥಿಗಳು, ಅತಿಗಣ್ಯ ವ್ಯಕ್ತಿಗಳಿಗೆ, ಆತಿಥ್ಯದ ವೆಚ್ಚಗಳ ನಿರ್ವಹಣೆ ಮತ್ತು ಸಭೆಗಳ ನಿರ್ವಹಣೆ. ಅತಿಥಿಗಳು, ವಿದ್ಯಾರ್ಥಿಗಳು, ಸಂದರ್ಶಕರು, ಸಂಸ್ಥೆಗೆ ಭೇಟಿ       ನೀಡುವ ಅತಿಗಣ್ಯರು ಇವರ ಭೇಟಿಗಳನ್ನು ನಿರ್ವಹಿಸುವಲ್ಲಿ ಸಹಕರಿಸುವುದು ಮತ್ತು ಅವುಗಳನ್ನು ವ್ಯವಸ್ಥೆಗೊಳಿಸುವುದು.
5. ಇತರ ಸರ್ಕಾರಿ ಸಂಸ್ಥೆಗಳಲ್ಲಿದ್ದಂತೆ, ವಿವಿಧ ಟೆಂಡರ್ ಮತ್ತು ನೇಮಕಾತಿ ಬಗ್ಗೆ ಪತ್ರಿಕಾ ಅಧಿಸೂಚನೆಗಳು, ಜಾಹಿರಾತು, ಪ್ರಚಾರವನ್ನು ಸಾರ್ವಜನಿಕ ಸಂಪರ್ಕಾಧಿಕಾರಿ ತಮ್ಮ ಮೂಲಕ ರವಾನಿಸುವುದು.
6.   ಕಳೆದ 4 ವರ್ಷಗಳಿಂದ ಧರ್ಮಶಾಲಾ ಉಸ್ತುವಾರಿ ಹೊಣೆಗಾರಿಕೆಯಿದೆ.
ಹೆಚ್ಚುವರಿ ಸಿಬ್ಬಂದಿ ಒದಗಿಸಿದಲ್ಲಿ, ಸಾರ್ವಜನಿಕ ಸಂಪರ್ಕ ವಿಭಾಗವು ನಡೆಸಲು ಉದ್ದೇಶಿಸಿರುವ ಕಾರ್ಯ ಚಟುವಟಿಕೆಗಳು ಹೀಗಿವೆ :
1.  ಕ್ಯಾನ್ಸರ್‌ಅನ್ನು ತಡೆಗಟ್ಟುವ ಅಂಶಗಳ ಬಗ್ಗೆ ರೋಗಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಶೈಕ್ಷಣಿಕ ಮಾರ್ಗದರ್ಶನವನ್ನು ಯೋಜಿಸುವುದು ಮತ್ತು ಒದಗಿಸುವುದು.
2.   ಕರ್ನಾಟಕದ ಇತರ ಭಾಗಗಳಲ್ಲಿ ಬಾಹ್ಯ ಕ್ಯಾನ್ಸರ್ ಕೇಂದ್ರಗಳನ್ನು ತೆರೆಯಲು ಯೋಜನೆ ಮತ್ತು ಸಹಾಯ ಒದಗಿಸುವುದು.
3.  ರಾಜ್ಯದಲ್ಲಿರುವ ಎಲ್ಲಾ ವೈದ್ಯಕೀಯ ಡಾಕ್ಟರ್‌ಗಳಿಗೆ ಕ್ಯಾನ್ಸರ್ ತಪಾಸಣೆ ಶಿಬಿರಗಳ ಕುರಿತು ಬೋಧನೆ ಮತ್ತು ಶಿಕ್ಷಣ ಇತ್ಯಾದಿ ಸಮುದಾಯ ಆಧಾರಿತ ಚಟುವಟಿಕೆಗಳನ್ನು ಯೋಜಿಸುವುದು ಮತ್ತು ಸಹಾಯ ಮಾಡುವುದು.
4.   ಸಾರ್ವಜನಿಕರಿಗೆ ಶಿಕ್ಷಣ ನೀಡಲು ಸಾರ್ವಜನಿಕ ಸಂಪರ್ಕ ವಿಭಾಗದ ವತಿಯಿಂದ ಪುಸ್ತಕಗಳ ಪ್ರಕಟಣೆ.
5. ಜಿಲ್ಲೆಯ ಮಟ್ಟದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಪಶಾಮಕ ಆರೈಕೆಯನ್ನು ಒದಗಿಸುವಲ್ಲಿ ವಿವಿಧ ಇಲಾಖೆಗಳ ನಡುವಿನ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಸಂಸ್ಥೆಯ ಉಪಶಾಮಕ ಆರೈಕೆ ವಿಭಾಗದ ಮುಖ್ಯಸ್ಥರಿಗಾಗಿ ಯೋಜನೆ ಸಿದ್ಧಪಡಿಸುವುದು. ಮತ್ತು ಸಂಸ್ಥೆಯ ನಿರ್ದೇಶಕರಿಗೆ ಸಹಾಯ, ಸಹಕಾರ ಒದಗಿಸುವುದು.
6.   ಕರ್ನಾಟಕದ ವಿವಿಧ ಸ್ಥಳಗಳಿಂದ ಬರುವ ಕ್ಯಾನ್ಸರ್ ರೋಗಿಗಳಿಗಾಗಿ ಇರುವ ಧರ್ಮಶಾಲಾ ಸೌಲಭ್ಯವನ್ನು ಪರಿಷ್ಕರಿಸಲು ಯೋಜಿಸಿದೆ.
7.   ಬಡ ರೋಗಿಗಳ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ನಿರ್ದೇಶಕರಿಗೆ ಮತ್ತು ಇತರ ಸಂಬಂಧಪಟ್ಟ ಇಲಾಖೆಗಳ ಸಹಯೋಗದೊಂದಿಗೆ ಯೋಜಿಸುವುದು ಮತ್ತು ನೆರವು ಒದಗಿಸುವುದು.
8. ಆಡಳಿತ ವರ್ಗ ಹಾಗೂ ಸಂಸ್ಥೆಯ ಕುರಿತಾದ ಸಾರ್ವಜನಿಕ ವಿಶ್ವಾಸಗಳನ್ನು ವೃದ್ಧಿಸಲು, ಕಿ.ಸ್ಮಾ.ಗಂ.ಸಂಸ್ಥೆಯ ವಿವಿಧ ವಿಭಾಗಗಳ ನಡುವೆ ಅಂತರ್‌-ವಿಭಾಗೀಯ ಸಂಬಂಧಗಳನ್ನು ಬಲಪಡಿಸುವುದು.
9.   ಹೊಸ ಮಾದರಿಯ ಅತಿಥಿ ಗೃಹ/ ಕೊಠಡಿಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ.
10. ಸಾರ್ವಜನಿಕ ಸಂಪರ್ಕ ವಿಭಾಗದ ಅಭಿವೃದ್ಧಿಗೆ ಹೆಚ್ಚುವರಿ ಸಿಬ್ಬಂದಿಯ ಅಗತ್ಯವಿದೆ.

 

 

ಇತ್ತೀಚಿನ ನವೀಕರಣ​ : 02-07-2021 12:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ - ಬೆಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080